ನವದೆಹಲಿ: ಭಾರತೀಯ ಕ್ರಿಕೆಟಿಗ ರಿಷಭ್ ಪಂತ್ ಅವರು ಲಾರೆಸ್ ವರ್ಲ್ಡ್ ಕಮ್‌ಬ್ಯಾಕ್ ಆಫ್ ದಿ ಇಯರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಅವರು ಈಚೆಗೆ ಮಾರಣಾಂತಿಕ ಕಾರು ಅಪಘಾತದಿಂದ ಚೇತರಿಸಿಕೊಂಡು ವಾಪಾಸ್ಸಾದ ಕ್ರೀಡಾ ಸ್ಫೂರ್ತಿಗೆ ನಾಮನಿರ್ದೇಶನ ಮಾಡಲಾಗಿದೆ.
ಜಿಮ್ನಾಸ್ಟ್ ರೆಬೆಕಾ ಆಂಡ್ರೇಡ್, ಈಜುಗಾರ ಅರಿಯಾರ್ನೆ ಟಿಟ್ಮಸ್, ಸ್ಕೀ ರೇಸರ್ ಲಾರಾ ಗಟ್-ಬೆಹ್ರಾಮಿ, ಈಜುಗಾರ ಕೇಲೆಬ್ ಡ್ರೆಸೆಲ್ ಮತ್ತು ಮೋಟೋಜಿಪಿ ಸ್ಟಾರ್ ಮಾರ್ಕ್ ಮಾರ್ಕ್ವೆಜ್ ಸೇರಿದಂತೆ ಜಾಗತಿಕ ಕ್ರೀಡಾ ದಂತಕಥೆಗಳಲ್ಲಿ ಪಂತ್ ಅವರನ್ನು ನಾಮನಿರ್ದೇಶನ ಮಾಡಲಾಗಿದೆ.
ತನ್ನ 25 ನೇ ವಾರ್ಷಿಕೋತ್ಸವವನ್ನು ಆಚರಿಸುವ ಪ್ರತಿಷ್ಠಿತ ಲಾರೆಸ್ ವರ್ಲ್ಡ್ ಸ್ಪೋರ್ಟ್ಸ್ ಅವಾರ್ಡ್ಸ್ ಏಪ್ರಿಲ್ 21 ರಂದು ಮ್ಯಾಡ್ರಿಡ್‌ನಲ್ಲಿ ನಡೆಯಲಿದೆ, ಅಲ್ಲಿ ವಿಜೇತರನ್ನು ಘೋಷಿಸಲಾಗುತ್ತದೆ.
ಡಿಸೆಂಬರ್ 2020 ರಲ್ಲಿ ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ರಿಷಭ್ ಪಂತ್ ಗಂಭೀರವಾಗಿ ಗಾಯಗೊಂಡರು. ಇದು ಅವರ ವೃತ್ತಿ ಬದುಕನ್ನು ಮುಗಿಸಿತು ಎಂಬ ಸುದ್ದಿ ಹರಿದಾಡಿತ್ತು.
ಆದರೆ ಅವರು ಮುಂದಿನ 629 ದಿನಗಳಲ್ಲಿ ಕಠಿಣವಾದ ವಿಶ್ರಾಂತಿ ಪಡೆದು, ಆರೋಗ್ಯವನ್ನು ಕಾಪಾಡಿ ಮತ್ತೇ ವಾಪಾಸ್ಸಾದರು.