Publish Date: Sat, 19 Oct 2024 (18:35 IST)
Updated Date: Sat, 19 Oct 2024 (18:42 IST)
ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತದ ವಿಕೆಟ್ ಕೀಪರ್ ರಿಷಬ್ ಪಂತ್ 99ರನ್‌ಗಳಿಸಿ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದ್ದಾರೆ.
ಇದುವರೆಗೆ 7ಬಾರಿ 90ರ ನಂತರ ವಿಕೆಟ್ ಒಪ್ಪಿಸಿ ರಿಷಬ್ ಪಂತ್ ನಿರಾಸೆ ಮೂಡಿಸಿದ್ದಾರೆ.
ಇಂದು 99ರನ್‌ಗಳಲ್ಲಿ ಅಟೌ ಆಗುವ ಮೂಲಕ ಭಾರತದ ಟೆಸ್ಟ್ ಇತಿಹಾಸದಲ್ಲಿ 99ಕ್ಕೆ ಔಟಾದ ಎರಡನೇ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಎಂದು ರಿಷಬ್ ಪಂತ್ ಗುರುತಿಸಿಕೊಂಡಿದ್ದಾರೆ.
ಪಂತ್ ಮೊದಲ ಇನ್ನಿಂಗ್ಸ್‌ನಲ್ಲಿ ಶತಕಕ್ಕೆ ಅರ್ಹರಾಗಿದ್ದು, ಆದರೆ ದುರಾದೃಷ್ಟ ಅದನ್ನು ಪೂರ್ಣಗೊಳಿಸುವಲ್ಲಿ ವಿಫಲರಾದರು. ರಿಷಬ್ ಪಂತ್ ಅವರ ನಿರ್ಭೀತ ಬ್ಯಾಟಿಂಗ್ ಶೈಲಿಯು ಅವರನ್ನು ವೀಕ್ಷಿಸಲು ಅತ್ಯಂತ ರೋಮಾಂಚಕ ಕ್ರಿಕೆಟಿಗರಲ್ಲಿ ಒಬ್ಬರನ್ನಾಗಿ ಮಾಡಿದೆ.