Daily Horoscope

Select Your Language

Notifications

webdunia
webdunia
webdunia
webdunia

ಕೆಎಲ್ ರಾಹುಲ್, ಕ್ರಿಕೆಟ್ ಬಿಟ್ಟು ಇನ್ನು ನಿಮ್ಮ ಮಾವನ ಜೊತೆ ಡ್ಯಾನ್ಸ್ ಆಡಕ್ಕೆ ಹೋಗು ಎಂದ ಫ್ಯಾನ್ಸ್

KL Rahul
ಬೆಂಗಳೂರು: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲೂ ವಿಫಲರಾದ ಕೆಎಲ್ ರಾಹುಲ್ ಮೇಲೆ ಅಭಿಮಾನಿಗಳ ಆಕ್ರೋಶದ ಕಟ್ಟೆ ಒಡೆದಿದೆ. ಸೋಷಿಯಲ್ ಮೀಡಿಯಾದಲ್ಲಿ ರಾಹುಲ್ ರನ್ನು ಇನ್ನಿಲ್ಲದಂತೆ ರೋಸ್ಟ್ ಮಾಡಿದ್ದಾರೆ.

ಕೆಎಲ್ ರಾಹುಲ್ ಕಳೆದ ಕೆಲವು ಪಂದ್ಯಗಳಿಂದ ಅಷ್ಟಾಗಿ ರನ್ ಗಳಿಸಿಲ್ಲ. ಬಾಂಗ್ಲಾದೇಶ ವಿರುದ್ಧ ಕೊನೆಯ ಇನಿಂಗ್ಸ್ ನಲ್ಲಿ ಮಾತ್ರ ರನ್ ಗಳಿಸಿದ್ದರು. ಉಳಿದಂತೆ ಅವರಿಂದ ನಿರೀಕ್ಷೆಗೆ ತಕ್ಕ ಆಟ ಬಂದಿಲ್ಲ. ಅದರಲ್ಲೂ ಇಂದು ತಂಡ ಸಂಕಷ್ಟದಲ್ಲಿದ್ದಾಗ ಅವರು ಸ್ವಲ್ಪ ಹೊತ್ತು ಸ್ಟ್ಯಾಂಡ್ ಕೊಟ್ಟಿದ್ದರೂ ಸಾಕಿತ್ತು.
  
ಹೇಳಿ ಕೇಳಿ ರಾಹುಲ್ ಗೆ ಚಿನ್ನಸ್ವಾಮಿ ತವರು ಮೈದಾನ. ವಿಪರ್ಯಾಸವೆಂದರೆ ಅವರು ಇಲ್ಲಿಯೂ ವಿಫಲರಾಗಿದ್ದಾರೆ. ಕೆಎಲ್ ರಾಹುಲ್ ಬೇಗನೇ ಔಟಾಗಿದ್ದರಿಂದ ಕೆಳ ಕ್ರಮಾಂಕದ ಬ್ಯಾಟಿಂಗ್ ಬೇಗನೇ ಬಾಲ ಮುದುರಿಕೊಂಡಿತ್ತು. ಇದರಿಂದಾಗಿ ನ್ಯೂಜಿಲೆಂಡ್ 107 ರನ್ ಗಳ ಸುಲಭ ಗುರಿ ಸಿಕ್ಕಿದೆ.

ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಇನ್ನು ನೀವು ಕ್ರಿಕೆಟ್ ಬಿಟ್ಟು ನಿಮ್ಮ ಮಾವ ಸುನಿಲ್ ಶೆಟ್ಟಿ ಜೊತೆ ಡ್ಯಾನ್ಸ್ ಮಾಡಕ್ಕೆ ಹೋಗಿ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ರಾಹುಲ್ ಬಿಟ್ಟು ದೇಶೀಯ ಕ್ರಿಕೆಟ್ ನಲ್ಲಿ ಚೆನ್ನಾಗಿ ಬ್ಯಾಟಿಂಗ್ ಮಾಡುವ ಎಷ್ಟೋ ಪ್ರತಿಭಾವಂತರಿಗೆ ಅವಕಾಶ ಕೊಟ್ಟಿದ್ದರೂ ಆಗಿರುತ್ತಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Rishabh Pant: 99 ಕ್ಕೆ ಔಟಾಗಿ ರಿಷಭ್ ಪಂತ್ ಮಾಡಿರುವ ದಾಖಲೆಗಳ ಪಟ್ಟಿ ಇಲ್ಲಿದೆ