Select Your Language

Notifications

webdunia
webdunia
webdunia
webdunia

IND vs NZ Test: ಅಭಿಮಾನಿಗಳು ವಾವ್ ಎನ್ನುವಂತಹ ವಿರಾಟ್ ಕೊಹ್ಲಿಯ ಕವರ್ ಡ್ರೈವ್ ವಿಡಿಯೋ

Kohli cover drive

Krishnaveni K

ಬೆಂಗಳೂರು , ಶುಕ್ರವಾರ, 18 ಅಕ್ಟೋಬರ್ 2024 (16:22 IST)
Photo Credit: X
ಬೆಂಗಳೂರು: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ದ್ವಿತೀಯ ಇನಿಂಗ್ಸ್ ನಲ್ಲಿ ಉತ್ತಮ ಬ್ಯಾಟಿಂಗ್ ನಡೆಸುತ್ತಿದೆ. ಅದರಲ್ಲೂ ವಿರಾಟ್ ಕೊಹ್ಲಿ ಮನಮೋಹಕ ಹೊಡೆತವೊಂದು ಎಲ್ಲರ ಗಮನ ಸೆಳೆದಿದೆ.

ಭಾರತ ಮೊದಲ ಇನಿಂಗ್ಸ್ ನಲ್ಲಿ ಕೇವಲ 46 ರನ್ ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ನ್ಯೂಜಿಲೆಂಡ್ 402 ರನ್ ಗಳಿಗೆ ಆಲೌಟ್ ಆಗುವ ಮೂಲಕ 356 ರನ್ ಗಳ ಬೃಹತ್ ಮುನ್ನಡೆ ಗಳಿಸಿತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡುತ್ತಿರುವ ಟೀಂ ಇಂಡಿಯಾ ಉತ್ತಮ ಆರಂಭ ಪಡೆದಿದೆ. ಇತ್ತೀಚೆಗಿನ ವರದಿ ಬಂದಾಗ 2 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿದೆ. ಹಿನ್ನಡೆ ದಾಟಲು ಇನ್ನೂ 174 ರನ್ ಗಳಿಸಬೇಕಿದೆ.

ಆದರೆ ಸಮಾಧಾನಕರ ಸಂಗತಿಯೆಂದರೆ ಮೊದಲ ಇನಿಂಗ್ಸ್ ನಲ್ಲಿ ತರಗಲೆಯಂತೆ ಉದುರಿದ್ದ ಟೀಂ ಇಂಡಿಯಾ ಅಗ್ರ ಕ್ರಮಾಂಕ ದ್ವಿತೀಯ ಇನಿಂಗ್ಸ್ ನಲ್ಲಿ ಉತ್ತಮ ಆಟವಾಡಿದೆ. ಆರಂಭಿಕ ಯಶಸ್ವಿ ಜೈಸ್ವಾಲ್ 35 ರನ್ ಗಳಿಗೆ ಮೊದಲನೆಯವರಾಗಿ ಔಟಾದರು. ಆದರೆ ಮೊದಲ ವಿಕೆಟ್ ಗೆ ರೋಹಿತ್ ಶರ್ಮಾ ಜೊತೆ 72 ರನ್ ಗಳ ಜೊತೆಯಾಟವಾಡಿದರು. ಇನ್ನೊಂದೆಡೆ ಉತ್ತಮವಾಗಿ ಆಡುತ್ತಿದ್ದ ರೋಹಿತ್ ಶರ್ಮಾ 52 ರನ್ ಗಳಿಸಿದ್ದಾಗ ಬೌಲ್ಡ್ ಔಟ್ ಆಗಿ ನಿರಾಸೆ ಅನುಭವಿಸಿದರು.

ಆದರೆ ವಿರಾಟ್ ಕೊಹ್ಲಿ ಈಗ 43 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದು ಅವರಿಗೆ 51 ರನ್ ಗಳಿಸಿರುವ ಸರ್ಫರಾಜ್ ಖಾನ್ ಜೊತೆಯಾಗಿದ್ದಾರೆ. ಸರ್ಫರಾಜ್ ಕೂಡಾ ಮೊದಲ ಇನಿಂಗ್ಸ್ ನಲ್ಲಿ ಶೂನ್ಯ ಸುತ್ತಿದ್ದರು. ಆದರೆ ದ್ವಿತೀಯ ಇನಿಂಗ್ಸ್ ನಲ್ಲಿ ತಮ್ಮ ಎಂದಿನ ಹೊಡೆಬಡಿಯ ಶೈಲಿ ಆಟದ ಮೂಲಕ ವೇಗವಾಗಿ ರನ್ ಗಳಿಸಿದರು.

ಆದರೆ ವಿರಾಟ್ ಕೊಹ್ಲಿ ಮನಮೋಹಕ ಕವರ್ ಡ್ರೈವ್ ಒಂದು ಎಲ್ಲರೂ ನಿಬ್ಬೆರಗಾಗುವಂತೆ ಮಾಡಿತು. ಇದಲ್ಲದೆ ಅವರ ಇನಿಂಗ್ಸ್ ನಿಂದ ಒಂದು ಅದ್ಭುತ ಸಿಕ್ಸರ್ ಕೂಡಾ ಬಂದಿದೆ. ಅವರ ಕವರ್ ಡ್ರೈವ್ ವಿಡಿಯೋ ಇಲ್ಲಿದೆ ನೋಡಿ.


Share this Story:

Follow Webdunia kannada

ಮುಂದಿನ ಸುದ್ದಿ

IND vs NZ Test: ಬೆಂಗಳೂರು ಬಾಯ್ ರಚಿನ್ ರವೀಂದ್ರ ಶತಕದ ಅಬ್ಬರ