Publish Date: Fri, 18 Oct 2024 (08:29 IST)
Updated Date: Fri, 18 Oct 2024 (08:32 IST)
ಬೆಂಗಳೂರು: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಭಾರತದ ಪರಿಸ್ಥಿತಿ ಹೀನಾಯವಾಗಿದೆ. ಇದೀಗ ಫ್ಯಾನ್ಸ್ ಮಳೆಯೇ ಕಾಪಾಡಬೇಕು ಎಂದು ಮೊರೆಯಿಡುತ್ತಿದ್ದಾರೆ.
ಚಿನ್ನಸ್ವಾಮಿ ಮೈದಾನದಲ್ಲಿ ಮಳೆ ಭೀತಿಯ ನಡುವೆಯೇ ಪಂದ್ಯ ನಡೆಯುತ್ತಿದೆ. ಮೊದಲ ದಿನದಾಟ ಮಳೆಗೆ ಸಂಪೂರ್ಣ ಆಹುತಿಯಾಗಿತ್ತು. ಆದರೆ ಎರಡನೇ ದಿನ ಪಂದ್ಯ ಆರಂಭವಾಗಿತ್ತು. ಆದರೆ ಎರಡನೇ ದಿನಕ್ಕೆ ಮಳೆ ಯಾಕೆ ನಿಂತಿತೋ ಎಂದು ಅಭಿಮಾನಿಗಳು ಹಿಡಿಶಾಪ ಹಾಕುವಂತಾಗಿದೆ ಭಾರತದ ಪರಿಸ್ಥಿತಿ.
ಮೊದಲ ಇನಿಂಗ್ಸ್ ನಲ್ಲಿ 46 ರನ್ ಗೆ ಆಲೌಟ್ ಆಗಿದ್ದ ಭಾರತ ಹೀನಾಯ ದಾಖಲೆ ಮಾಡಿದೆ. ಇನ್ನೊಂದೆಡೆ ನ್ಯೂಜಿಲೆಂಡ್ ಭರ್ಜರಿ ಬ್ಯಾಟಿಂಗ್ ಮಾಡುತ್ತಿದೆ. ಇದರಿಂದಾಗಿ ಈಗಾಗಲೇ ನ್ಯೂಜಿಲೆಂಡ್ ಮುನ್ನಡೆ 150 ಪ್ಲಸ್ ರನ್ ಗೆ ಬಂದು ನಿಂತಿದೆ. ಇದರಿಂದ ಭಾರತ ಸಂಕಷ್ಟಕ್ಕೆ ಸಿಲುಕಿದೆ.
ಹೀಗಾಗಿ ಈಗ ಅಭಿಮಾನಿಗಳು ಮಳೆಯೇ ಭಾರತ ತಂಡವನ್ನು ಕಾಪಾಡಬೇಕು ಎಂದು ಮೊರೆಯಿಡುತ್ತಿದ್ದಾರೆ. ಇಂದೂ ಭಾರೀ ಮಳೆಯಾಗಲಿ ಇದರಿಂದಾದರೂ ಭಾರತ ಹೀನಾಯ ಸೋಲು ಕಾಣುವುದು ತಪ್ಪುತ್ತದೆ ಎಂದು ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದಾರೆ.