Select Your Language

Notifications

webdunia
webdunia
webdunia
webdunia

ಅಜಯ್‌ ಜಡೇಜಾಗೆ ಖುಲಾಯಿಸಿದ ಅದೃಷ್ಟ: ಜಾಮ್‌ನಗರ ಸಿಂಹಾಸನದ ಉತ್ತರಾಧಿಕಾರಿಯಾಗಿ ಆಯ್ಕೆ

ಅಜಯ್‌ ಜಡೇಜಾಗೆ ಖುಲಾಯಿಸಿದ ಅದೃಷ್ಟ: ಜಾಮ್‌ನಗರ ಸಿಂಹಾಸನದ ಉತ್ತರಾಧಿಕಾರಿಯಾಗಿ ಆಯ್ಕೆ

Sampriya

ಅಹಮದಾಬಾದ್ , ಭಾನುವಾರ, 13 ಅಕ್ಟೋಬರ್ 2024 (13:50 IST)
Photo Courtesy X
ಅಹಮದಾಬಾದ್‌: ಇಲ್ಲಿನ ಜಾಮ್‌ನಗರ ಎಂದು ಕರೆಯಲ್ಪಡುವ ನವನಗರದ ಸಿಂಹಾಸನದ ಉತ್ತರಾಧಿಕಾರಿಯಾಗಿ ‌ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಅಜಯ್ ಜಡೇಜಾ ಅವರನ್ನು ಆಯ್ಕೆ ಮಾಡಲಾಗಿದೆ.

ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಅವರನ್ನು ನವನಗರದ ಮುಂದಿನ ಜಾಮ್ ಸಾಹೇಬ್ ಎಂದು ಘೋಷಿಸಲಾಗಿದ್ದು, ನವನಗರವನ್ನು ಈಗ ಜಾಮ್‌ನಗರ ಎಂದು ಕರೆಯಲಾಗುತ್ತದೆ.

ಇದು ಗುಜರಾತ್‌ನ ಗಲ್ಫ್ ಆಫ್ ಕಚ್‌ನ ದಕ್ಷಿಣ ಕರಾವಳಿಯಲ್ಲಿರುವ ಐತಿಹಾಸಿಕ ಹಲಾರ್ ಪ್ರದೇಶದಲ್ಲಿ ನೆಲೆಗೊಂಡಿರುವ ಭಾರತೀಯ ರಾಜಪ್ರಭುತ್ವದ ರಾಜ್ಯವಾಗಿದೆ. ನವನಗರದ ಮಹಾರಾಜ ಜಾಮ್ ಸಾಹೇಬ್ ಈ ವಿಚಾರವನ್ನು ತಮ್ಮ ಹೇಳಿಕೆಯಲ್ಲಿ ಖಚಿತಪಡಿಸಿದ್ದಾರೆ.

ಅಂದಹಾಗೆ ಅಜಯ್ ಜಡೇಜಾ ಸೇರಿರುವ ಜಾಮ್‌ನಗರ ರಾಜಮನೆತನವು ಕ್ರಿಕೆಟ್‌ನಲ್ಲಿ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಪ್ರತಿಷ್ಠಿತ ರಣಜಿ ಟ್ರೋಫಿ ಮತ್ತು ದುಲೀಪ್ ಟ್ರೋಫಿಗೆ ಜಡೇಜಾ ಅವರ ಸಂಬಂಧಿಕರಾದ ಕೆ. ಎಸ್. ರಂಜಿತ್ ಸಿನ್ಹಜಿ ಮತ್ತು ಕೆ ಎಸ್ ದುಲೀಪ್ ಸಿನ್ಹಜಿ ಅವರ ಹೆಸರನ್ನು ಇಡಲಾಗಿದೆ.

ಭಾರತೀಯ ಕ್ರಿಕೆಟ್ ತಂಡದ ನಾಯಕರಾಗಿ ಸೇವೆ ಸಲ್ಲಿಸಿರುವ 53 ವರ್ಷದ ಜಡೇಜಾ ಅವರು ಜಾಮ್‌ನಗರ ರಾಜಮನೆತನದ ವಂಶಸ್ಥರು. ಅವರು 1971 ರಲ್ಲಿ ನವನಗರ ಎಂದು ಕರೆಯಲ್ಪಡುವ ಜಾಮ್‌ನಗರದಲ್ಲಿ ದೌಲತ್‌ಸಿನ್ಹಜಿ ಜಡೇಜಾ ಅವರ ಪುತ್ರನಾಗಿ ಜನಿಸಿದರು. ಅವರ ತಂದೆ ಶತ್ರಿಸಲ್ಯಸಿಂಹಜಿಯವರ ಸೋದರ ಸಂಬಂಧಿಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಂಜು, ಸೂರ್ಯ ಅಬ್ಬರಕ್ಕೆ ಬಾಂಗ್ಲಾ ತತ್ತರ: ಸಾಲು ಸಾಲು ದಾಖಲೆ ಬರೆದ ಭಾರತ