ಬೆಂಗಳೂರು: ಆರ್ ಸಿಬಿ ಗೆದ್ದು ಕ್ವಾಲಿಫೈಯರ್ ಗೇರಿದ ಖುಷಿಯಲ್ಲಿ ಪೆವಿಲಿಯನ್ ನಲ್ಲಿದ್ದ ವಿರಾಟ್ ಕೊಹ್ಲಿ ಕುಣಿದು ಕುಣಿದು ಸ್ಟೆಪ್ಸ್ ಇಳಿದು ಬಂದ ಫನ್ನಿ ವಿಡಿಯೋ ವೈರಲ್ ಆಗಿದೆ.
ಐಪಿಎಲ್ 2025 ರಲ್ಲಿ ನಿನ್ನೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 6 ವಿಕೆಟ್ ಗಳಿಂ ಗೆದ್ದು ಆರ್ ಸಿಬಿ ಅಧಿಕಾರಯುತವಾಗಿ ಕ್ವಾಲಿಫೈಯರ್ 1 ಗೆ ಅರ್ಹತೆ ಪಡೆಯಿತು. ಇದೀಗ ಕ್ವಾಲಿಫೈಯರ್ 1 ರಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.
ಈ ಪಂದ್ಯದ ಕೊನೆಯ ಐದು ಓವರ್ ಗಳು ರೋಚಕವಾಗಿತ್ತು. ಆದರೆ ಮಯಾಂಕ್ ಅಗರ್ವಾಲ್ ಮತ್ತು ಜಿತೇಶ್ ಶರ್ಮಾ ಭರ್ಜರಿ ಬ್ಯಾಟಿಂಗ್ ನಡೆಸಿ ತಂಡವನ್ನು ಗೆಲ್ಲಿಸಿದರು. ಜಿತೇಶ್ ಅಜೇಯ 85 ರನ್ ಸಿಡಿಸಿದರು. ಹಂಗಾಮಿ ನಾಯಕರಾಗಿರುವ ಜಿತೇಶ್ ತಮ್ಮ ಪಾತ್ರವನ್ನು ಚೊಕ್ಕವಾಗಿ ನಿಭಾಯಿಸಿದರು.
ಕೊನೆಯ 5 ಓವರ್ ವೇಳೆ ವಿರಾಟ್ ಕೊಹ್ಲಿ ಪೆವಿಲಿಯನ್ ನಲ್ಲೇ ಟೆನ್ಷನ್ ನಲ್ಲಿ ಅತ್ತಿತ್ತ ಓಡಾಡುತ್ತಿದ್ದರು. ಪಂದ್ಯ ಗೆಲ್ಲುವುದು ಖಚಿತವಾಗುತ್ತಿದ್ದಂತೇ ಚಿಕ್ಕಮಕ್ಕಳಂತೆ ಕುಣಿದಾಡಿಕೊಂಡು ಮೆಟ್ಟಿಲಿಳಿದು ಮೈದಾನಕ್ಕೆ ಬಂದಿದ್ದಾರೆ. ಪಂದ್ಯ ಗೆಲ್ಲುತ್ತಿದ್ದ ಡಗೌಟ್ ನಲ್ಲಿ ಸೀಟ್ ನಿಂದ ಜಿಗಿದು ಸಂಭ್ರಮಿಸಿದ್ದಾರೆ. ಕೊಹ್ಲಿಯ ಸಂಭ್ರಮದ ಫನ್ನಿ ವಿಡಿಯೋ ಇಲ್ಲಿದೆ ನೋಡಿ.