Select Your Language

Notifications

webdunia
webdunia
webdunia
webdunia

ರಣಜಿ ಟ್ರೋಫಿ ಕ್ರಿಕೆಟ್: ಮಯಾಂಕ್-ಮನೀಶ್ ಬೊಂಬಾಟ್ ಆಟ

ರಣಜಿ ಟ್ರೋಫಿ ಕ್ರಿಕೆಟ್: ಮಯಾಂಕ್-ಮನೀಶ್ ಬೊಂಬಾಟ್ ಆಟ
ದೆಹಲಿ , ಭಾನುವಾರ, 26 ನವೆಂಬರ್ 2017 (11:50 IST)
ದೆಹಲಿ: ರೈಲ್ವೇಸ್ ವಿರುದ್ಧದ ರಣಜಿ ಲೀಗ್ ಪಂದ್ಯದಲ್ಲಿ ಕರ್ನಾಟಕ ಆರಂಭಿಕ ಕುಸಿತ ಕಂಡಿದ್ದರೂ ಮಯಾಂಕ್ ಅಗರ್ವಾಲ್ ಮತ್ತು ಮನೀಶ್ ಪಾಂಡೆ ಭರ್ಜರಿ ಶತಕದ ನೆರವಿನಿಂದ ಮೊದಲ ಇನಿಂಗ್ಸ್ ನಲ್ಲಿ 434 ರನ್ ಪೇರಿಸಿದೆ.
 

ಈ ಋತುವಿನಲ್ಲಿ ಭರ್ಜರಿ ಫಾರ್ಮ್ ನಲ್ಲಿರುವ ಮಯಾಂಕ್ ಮತ್ತೊಂದು ಶತಕ ಭಾರಿಸಿ, 173 ರನ್ ಗಳಿಗೆ ಔಟ್ ಆದರು. ಅವರಿಗೆ 108 ರನ್ ಗಳಿಸಿದ ಮನೀಶ್ ಪಾಂಡೆ ಉತ್ತಮ ಸಾಥ್ ನೀಡಿದರು. ಕೊನೆಯಲ್ಲಿ ಶ್ರೇಯಸ್ ಗೋಪಾಲ್ ಬಿರುಸಿನ 44 ರನ್ ಗಳಿಸಿದರು.

ಇದೀಗ ಬ್ಯಾಟಿಂಗ್ ಆರಂಭಿಸಿರುವ ರೈಲ್ವೇಸ್ ವಿಕೆಟ್ ನಷ್ಟವಿಲ್ಲದೇ 4 ಓವರ್ ಗಳಲ್ಲಿ 17 ರನ್ ಗಳಿಸಿದೆ. ಕರ್ನಾಟಕದ ಮೊದಲ ಇನಿಂಗ್ಸ್ ಮೊತ್ತ ದಾಟಲು ಇನ್ನೂ 417 ರನ್ ಗಳಿಸಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಾಗ್ಪುರ ಟೆಸ್ಟ್: ಕೊಹ್ಲಿ-ಪೂಜಾರ ಬ್ಯಾಂಡ್ ಬಜಾಯಿಸ್ತಿದ್ರೆ ಲಂಕಾ ಸುಸ್ತೋ ಸುಸ್ತು