Select Your Language

Notifications

webdunia
webdunia
webdunia
webdunia

ರಣಜಿ ಟ್ರೋಫಿ ಕ್ರಿಕೆಟ್: ಕುಸಿದ ಕರ್ನಾಟಕದ ಬಲಾಢ್ಯ ಬ್ಯಾಟಿಂಗ್

ರಣಜಿ ಟ್ರೋಫಿ ಕ್ರಿಕೆಟ್: ಕುಸಿದ ಕರ್ನಾಟಕದ ಬಲಾಢ್ಯ ಬ್ಯಾಟಿಂಗ್
ದೆಹಲಿ , ಶನಿವಾರ, 25 ನವೆಂಬರ್ 2017 (10:50 IST)
ದೆಹಲಿ: ರೈಲ್ವೇಸ್ ವಿರುದ್ಧ ನಡೆಯುತ್ತಿರುವ ರಣಜಿ ಟ್ರೋಫಿ ಕೊನೆಯ ಲೀಗ್ ಪಂದ್ಯದಲ್ಲಿ ಕರ್ನಾಟಕ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ್ದು, ಆರಂಭಿಕ ಆಘಾತ ಅನುಭವಿಸಿದೆ.
 

ಇತ್ತೀಚೆಗಿನ ವರದಿ ಬಂದಾಗ ಕರ್ನಾಟಕ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು 54 ರನ್ ಗಳಿಸಿದೆ. ಕಳೆದ ಪಂದ್ಯದಲ್ಲಿ ಶತಕ ಭಾರಿಸಿದ್ದ ದೇಗ ನಿಶ್ಚಲ್ (4) ಮತ್ತು ರವಿಕಾಂತ್ ಸಮರ್ಥ್ (0) ಹಾಗೂ ಕರುಣ್ ನಾಯರ್ (10) ಔಟಾಗಿ ಪೆವಿಲಿಯನ್ ಸೇರಿಕೊಂಡಿದ್ದಾರೆ.

ಮನೀಶ್ ರಾವ್ 2 ವಿಕೆಟ್ ಕಿತ್ತು ಕರ್ನಾಟಕಕ್ಕೆ ಆರಂಭಿಕ ಆಘಾತ ನೀಡಿದರು. ಇದೀಗ ಮನೀಶ್ ಪಾಂಡೆ 9 ಮತ್ತು ಮಯಾಂಕ್ ಅಗರ್ವಾಲ್ 29 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಈಗಾಗಲೇ ಕ್ವಾರ್ಟರ್ ಫೈನಲ್ ಗೆ ಅರ್ಹತೆ ಗಿಟ್ಟಿಸಿಕೊಂಡಿರುವ ಕರ್ನಾಟಕಕ್ಕೆ ಇದು ಕೊನೆಯ ಲೀಗ್ ಪಂದ್ಯವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಗಂಗೂಲಿ ಸಂಕಟಕ್ಕೆ ಕಾರಣವಾಯ್ತು ಸೊಳ್ಳೆ!