Publish Date: Mon, 03 Jan 2022 (09:20 IST)
Updated Date: Mon, 03 Jan 2022 (09:29 IST)
ಜೊಹಾನ್ಸ್ ಬರ್ಗ್: ಟೀಂ ಇಂಡಿಯಾ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಮಾಧ‍್ಯಮಗಳನ್ನು ಬೇಕೆಂದೇ ಅವಾಯ್ಡ್ ಮಾಡುತ್ತಿದ್ದಾರಾ? ಇತ್ತೀಚೆಗೆ ಕೊಹ್ಲಿ ಯಾವುದೇ ಪಂದ್ಯ ಪೂರ್ವ ಮಾಧ‍್ಯಮಗೋಷ್ಠಿಯಲ್ಲಿ ಭಾಗಿಯಾಗದಿರುವುದೇ ಈ ಅನುಮಾನಗಳಿಗೆ ಕಾರಣ.
ಸಾಮಾನ್ಯವಾಗಿ ನಾಯಕ, ಉಪನಾಯಕ ಮಾಧ‍್ಯಮಗೋಷ್ಠಿಯಲ್ಲಿ ಭಾಗಿಯಾಗುತ್ತಾರೆ. ಆದರೆ ಕೊಹ್ಲಿ ಇತ್ತೀಚೆಗಿನ ದಿನಗಳಲ್ಲಿ ಮಾಧ್ಯಮಗೋಷ್ಠಿಗೆ ಬರುತ್ತಲೇ ಇಲ್ಲ. ಹೀಗಾಗಿ ಅವರನ್ನು ಬೇಕೆಂದೇ ಹೀಗೆ ಮಾಡುತ್ತಿದ್ದಾರಾ ಎಂದು ಮಾಧ‍್ಯಮಗಳು ಕೋಚ್ ರಾಹುಲ್ ದ್ರಾವಿಡ್ ರನ್ನು ಪ್ರಶ್ನೆ ಮಾಡಿವೆ.
ಈ ಅನುಮಾನಗಳನ್ನು ತಳ್ಳಿ ಹಾಕಿರುವ ದ್ರಾವಿಡ್, ಕೊಹ್ಲಿ ತಮ್ಮ 100 ನೇ ಟೆಸ್ಟ್ ಗೆ ಮುನ್ನ ನಡೆಯಲಿರುವ ಪ್ರೆಸ್ ಕಾನ್ಫರೆನ್ಸ್ ನಲ್ಲಿ ಭಾಗಿಯಾಗಲಿದ್ದಾರೆ ಎಂದಿದ್ದಾರೆ. ಆಫ್ರಿಕಾ ವಿರುದ್ಧ ಜನವರಿ 11 ರಿಂದ ಆರಂಭವಾಗಲಿರುವ ಮೂರನೇ ಟೆಸ್ಟ್ ಪಂದ್ಯ ಕೊಹ್ಲಿ ಪಾಲಿಗೆ 100 ನೇ ಟೆಸ್ಟ್ ಪಂದ್ಯವಾಗಲಿದೆ.