Publish Date: Sun, 02 Jan 2022 (08:55 IST)
Updated Date: Sun, 02 Jan 2022 (09:20 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮದುವೆಯಾದ ಮೇಲೆ ಅನುಷ್ಕಾ ಶರ್ಮಾ ಸಿನಿಮಾಗಳಲ್ಲಿ ಅಪರೂಪವಾದರು. ಅದರಲ್ಲೂ ಮಗಳು ವಮಿಕಾ ಬಂದ ಮೇಲೆ ದೂರವೇ ಉಳಿದಿದ್ದಾರೆ. ಆದರೆ ಈಗ ಮತ್ತೆ ಕಮ್ ಬ್ಯಾಕ್ ಮಾಡುವ ಸೂಚನೆ ನೀಡಿದ್ದಾರೆ.
ಮೂಲಗಳ ಪ್ರಕಾರ ಅನುಷ್ಕಾ ಒಟ್ಟೊಟ್ಟಿಗೆ ಮೂರು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರಂತೆ. ಇದರ ಬಗ್ಗೆ ಸದ್ಯದಲ್ಲೇ ಅವರಿಂದ ಅಧಿಕೃತವಾಗಿ ಅಪ್ ಡೇಟ್ ಸಿಗಲಿದೆ.
ಶಾರುಖ್ ಖಾನ್ ಜೊತೆಗೆ ಜೀರೋ ಸಿನಿಮಾ ಪ್ಲಾಪ್ ಆದ ಬಳಿಕ ಅನುಷ್ಕಾ ಅಭಿನಯದ ಸಿನಿಮಾಗಳು ಬಿಡುಗಡೆಯಾಗಿರಲಿಲ್ಲ. ಮೂರು ವರ್ಷಗಳಲ್ಲಿ ಅನುಷ್ಕಾ ವೆಬ್ ಸರಣಿ ನಿರ್ಮಿಸಿದ್ದರು. ಆದರೆ ಸಿನಿಮಾಗೆ ಮತ್ತೆ ಕಮ್ ಬ್ಯಾಕ್ ಮಾಡಲು ತಯಾರಾಗಿದ್ದಾರೆ ಎನ್ನಲಾಗಿದೆ.