Select Your Language

Notifications

webdunia
webdunia
webdunia
webdunia

ಅಜಿಂಕ್ಯಾ ರೆಹಾನೆಗೆ ದ್ರಾವಿಡ್, ಕೊಹ್ಲಿ ಬಲ

ಅಜಿಂಕ್ಯಾ ರೆಹಾನೆಗೆ ದ್ರಾವಿಡ್, ಕೊಹ್ಲಿ ಬಲ
ಸೆಂಚೂರಿಯನ್ , ಭಾನುವಾರ, 2 ಜನವರಿ 2022 (12:09 IST)
ಸೆಂಚೂರಿಯನ್: ಫಾರ್ಮ್ ಕಳೆದುಕೊಂಡಿರುವ ಅಜಿಂಕ್ಯಾ ರೆಹಾನೆ ಇನ್ನೇನು ತಂಡದಿಂದ ಹೊರಗುಳಿಯುತ್ತಾರೆ ಎಂದೇ ಎಲ್ಲರೂ ಮಾತನಾಡಿಕೊಳ್ಳುತ್ತಿರಬೇಕಾದರೆ ಅವರಿಗೆ ಪದೇ ಪದೇ ಅವಕಾಶ ಸಿಗುತ್ತಿರುವುದು ಹೇಗೆ ಗೊತ್ತಾ?

ಅಜಿಂಕ್ಯಾ ರೆಹಾನೆ ಟೆಸ್ಟ್ ಕ್ರಿಕೆಟ್ ಗೆ ಹೇಳಿ ಮಾಡಿಸಿದ ಆಟಗಾರ. ಈಗ ಫಾರ್ಮ್ ಕಳೆದುಕೊಂಡಿರಬಹುದು. ಆದರೆ ಹಿಂದೆ ಹಲವು ಬಾರಿ ತಂಡಕ್ಕೆ ಆಪತ್ ಬಾಂಧವರಾಗಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ನಾಯಕ ಕೊಹ್ಲಿಗೆ ಅತ್ಯಂತ ಪ್ರಿಯ ಆಟಗಾರ. ಕೊಹ್ಲಿ ಅನುಪಸ್ಥಿತಿಯಲ್ಲಿ ಅನೇಕ ಬಾರಿ ತಂಡದ ನಾಯಕತ್ವ ವಹಿಸಿದವರು.

ಅಷ್ಟೇ ಅಲ್ಲದೆ, ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗಿದವರಾಗಿದ್ದರಿಂದ ಅವರಿಗೂ ರೆಹಾನೆ ಮೇಲೆ ವಿಶೇಷ ಕಾಳಜಿಯಿದೆ. ಹೀಗಾಗಿ ಇಬ್ಬರ ಬೆಂಬಲದಿಂದಾಗಿ ರೆಹಾನೆಗೆ ಮತ್ತೊಂದು ಅವಕಾಶ ಸಿಗುತ್ತಿದೆ. ಆದರೆ ಅದನ್ನು ಅವರು ಬಳಸಿಕೊಳ್ಳುತ್ತಿಲ್ಲ ಎನ್ನುವುದು ವಿಪರ್ಯಾಸ.

Share this Story:

Follow Webdunia kannada

ಮುಂದಿನ ಸುದ್ದಿ

ದ.ಆಫ್ರಿಕಾ ಏಕದಿನ ಸರಣಿಗೆ ಕೆಎಲ್ ರಾಹುಲ್ ಕ್ಯಾಪ್ಟನ್: ನೆಟ್ಟಿಗರ ಅಸಮಾಧಾನ