Publish Date: Sun, 02 Jan 2022 (11:32 IST)
Updated Date: Sun, 02 Jan 2022 (09:15 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟ್ ಖ್ಯಾತಿಗೆ ತಕ್ಕ ಹಾಗೆ ಝಳಪಿಸದೇ ಎರಡು ವರ್ಷವಾಗುತ್ತಾ ಬಂದಿದೆ. ಈ ಹೊಸ ವರ್ಷವಾದರೂ ಕೊಹ್ಲಿ ಪಾಲಿಗೆ ಶುಭವಾಗಲಿ ಎನ್ನುವುದು ಅಭಿಮಾನಿಗಳ ಹಾರೈಕೆ.
ಕಳೆದ ಎರಡು ವರ್ಷಗಳಿಂದ ಕೊಹ್ಲಿ ಒಂದೇ ಒಂದು ಶತಕ ದಾಖಲಿಸಿಲ್ಲ. ಶತಕ ಎನ್ನುವುದಕ್ಕಿಂತ ಅವರ ಖ್ಯಾತಿಗೆ ತಕ್ಕ ಆಟವೇ ಬಂದಿಲ್ಲ. ಸತತ ವೈಫಲ್ಯಕ್ಕೊಳಗಾಗಿರುವ ಕೊಹ್ಲಿ ಈಗ ಸೀಮಿತ ಓವರ್ ಗಳ ನಾಯಕತ್ವವನ್ನೇ ಕಳೆದುಕೊಂಡಿದ್ದಾರೆ.
ಹೀಗಾಗಿ ಜವಾಬ್ಧಾರಿಯಿಂದ ಮುಕ್ತರಾಗಿರುವ ಅವರು ಈ ವರ್ಷ ಟೀಕಾಕಾರರಿಗೆ ಬ್ಯಾಟ್ ಮೂಲಕ ಉತ್ತರಿಸಬಹುದು ಎಂಬ ನಿರೀಕ್ಷೆ ಅಭಿಮಾನಿಗಳದ್ದು.