ಜೊಹಾನ್ಸ್ ಬರ್ಗ್: ಭಾರತ ಮತ್ತು ದ.ಆಫ್ರಿಕಾ ನಡುವೆ ಇಂದಿನಿಂದ ದ್ವಿತೀಯ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಪ್ಲೇಯಿಂಗ್ ಇಲೆವೆನ್ ಬಗ್ಗೆ ಚರ್ಚೆಗಳು ಆರಂಭವಾಗಿದೆ.
									
			
			 
 			
 
 			
			                     
							
							
			        							
								
																	ಮೊದಲ ಟೆಸ್ಟ್ ಪಂದ್ಯದಲ್ಲಿ ಸಂಘಟಿತ ಪ್ರದರ್ಶನ ನೀಡಿದ್ದ ಆಟಗಾರರನ್ನು ಈ ಪಂದ್ಯದಲ್ಲೂ ಬಹುತೇಕ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚು. ವಿಶೇಷವಾಗಿ ಬೌಲರ್ ಗಳು ಎಲ್ಲರಿಂದಲೂ ಉತ್ತಮ ಪ್ರದರ್ಶನವೇ ಬಂದಿದೆ. ಹೀಗಾಗಿ ಬೌಲಿಂಗ್ ವಿಭಾಗದಲ್ಲಿ ಬದಲಾವಣೆಯಾಗುವ ಸಾಧ‍್ಯತೆ ಕಡಿಮೆ.
									
										
								
																	ಇನ್ನು ಬ್ಯಾಟಿಂಗ್ ಕ್ರಮಾಂಕದಲ್ಲೂ ಚೇತೇಶ್ವರ ಪೂಜಾರ ಬಿಟ್ಟರೆ ಉಳಿದೆಲ್ಲರೂ ಸಮಾಧಾನಕರ ಪ್ರದರ್ಶನ ನೀಡಿದ್ದಾರೆ. ಒಂದು ವೇಳೆ ಪೂಜಾರಗೆ ಕೊಕ್ ಕೊಡುವ ದೊಡ್ಡ ನಿರ್ಧಾರ ತೆಗೆದುಕೊಂಡರೆ ಶ್ರೇಯಸ್ ಐಯರ್ ಅಥವಾ ಹನುಮ ವಿಹಾರಿಗೆ ಚಾನ್ಸ್ ಕುದುರಬಹುದು. ಇಲ್ಲದೇ ಹೋದರೆ ಅದೇ ತಂಡ ಕಣಕ್ಕಿಳಿಯುವುದು ಗ್ಯಾರಂಟಿ.