Publish Date: Sun, 02 Jan 2022 (09:35 IST)
Updated Date: Sun, 02 Jan 2022 (09:44 IST)
ಮುಂಬೈ: ರೋಹಿತ್ ಶರ್ಮಾ ಸೀಮಿತ ಓವರ್ ಗಳಿಗೆ ನಾಯಕರಾದ ಬಳಿಕ ವಿರಾಟ್ ಕೊಹ್ಲಿ ಜೊತೆಗೆ ಅವರ ಸಂಬಂಧ ಹಳಸಿದೆ ಎಂಬ ವರದಿಗಳ ಬಗ್ಗೆ ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ ಪ್ರತಿಕ್ರಿಯಿಸಿದ್ದಾರೆ.
ಕಳೆದ ಕೆಲವು ತಿಂಗಳಿನಿಂದ ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಇದೆ. ಈ ಬಗ್ಗೆ ಚೇತನ್ ಶರ್ಮಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇಬ್ಬರೂ ದಿಗ್ಗಜ ಕ್ರಿಕೆಟಿಗರ ಸಂಬಂಧದಲ್ಲಿ ಯಾವುದೇ ಬಿರುಕಿಲ್ಲ. ಇಬ್ಬರೂ ಚೆನ್ನಾಗಿಯೇ ಇದ್ದಾರೆ. ದುರದೃಷ್ಟವಶಾತ್ ಇಬ್ಬರನ್ನೂ ಟಾರ್ಗೆಟ್ ಮಾಡಲಾಗುತ್ತಿದೆ. ಅವರ ನಡುವೆ ಅಂತಹ ಯಾವುದೇ ವೈಮನಸ್ಯಗಳಿಲ್ಲ ಎಂದು ಚೇತನ್ ಶರ್ಮಾ ಸ್ಪಷ್ಟಪಡಿಇದ್ದಾರೆ.