ಬೆಂಗಳೂರು: ಏಕದಿನ ವಿಶ್ವಕಪ್ ನಲ್ಲಿ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಪಾಕಿಸ್ತಾನ ತಂಡ ನ್ಯೂಜಿಲೆಂಡ್ ವಿರುದ್ಧ ಡಕ್ ವರ್ತ್ ಲೂಯಿಸ್ ನಿಯಮದ ಪ್ರಕಾರ 21 ರನ್ ಗಳಿಂದ ಸೋಲಿಸಿ ಸೆಮಿಫೈನಲ್ ರೇಸ್ ನಲ್ಲಿ ಉಳಿದುಕೊಂಡಿದೆ.
ಇಂದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 50 ಓವರ್ ಗಳಲ್ಲಿ 401 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಆದರೆ ಪಾಕ್ 21.3 ಓವರ್ ಗಳಷ್ಟು ಬ್ಯಾಟಿಂಗ್ ಮಾಡಿದಾಗ ಮಳೆ ಬಂತು. ಮತ್ತೆ ಆಟ ಶುರುವಾದರೂ ಮೂರು ಓವರ್ ಆಟ ನಡೆಯುವಷ್ಟರಲ್ಲಿ ಮತ್ತೆ ಮಳೆ ಶುರುವಾಯಿತು. ಆಗ ಪಾಕ್ 25.3 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿತ್ತು.
ಮತ್ತೆ ಮಳೆ ಬಿಡದೇ ಹೋದಾಗ ಡಕ್ ವರ್ತ್ ಲೂಯಿಸ್ ನಿಯಮದ ಪ್ರಕಾರ ಪಾಕ್ ಗೆ 21 ರನ್ ಗಳ ಗೆಲುವು ಘೋಷಣೆ ಮಾಡಲಾಯಿತು. ಈ ಗೆಲುವಿನೊಂದಿಗೆ ಪಾಕ್ ಸೆಮಿಫೈನಲ್ ರೇಸ್ ನಲ್ಲಿ ತಾನು ಉಳಿದುಕೊಂಡಿದ್ದಲ್ಲದೆ, ದ.ಆಫ್ರಿಕಾದ ಸೆಮಿಫೈನಲ್ ಸ್ಥಾನ ಭದ್ರಪಡಿಸಿತು.