Select Your Language

Notifications

webdunia
webdunia
webdunia
webdunia

ನಾಯಕನಾಗಿ ಕೇನ್ ವಿಲಿಯಮ್ಸನ್ ಕಮ್ ಬ್ಯಾಕ್: ಬೆಂಗಳೂರಿನಲ್ಲಿ ಕಿವೀಸ್ ಬ್ಯಾಟಿಂಗ್

ನಾಯಕನಾಗಿ ಕೇನ್ ವಿಲಿಯಮ್ಸನ್ ಕಮ್ ಬ್ಯಾಕ್: ಬೆಂಗಳೂರಿನಲ್ಲಿ ಕಿವೀಸ್ ಬ್ಯಾಟಿಂಗ್
ಬೆಂಗಳೂರು , ಶನಿವಾರ, 4 ನವೆಂಬರ್ 2023 (10:55 IST)
ಬೆಂಗಳೂರು: ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಇಂದಿನ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವೆ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಮಹತ್ವದ ಪಂದ್ಯ ನಡೆಯುತ್ತಿದೆ.

ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬೌಲಿಂಗ್ ಆಯ್ದುಕೊಂಡಿದೆ. ನ್ಯೂಜಿಲೆಂಡ್ ಇತ್ತೀಚೆಗಿನ ವರದಿ ಬಂದಾಗ ವಿಕೆಟ್ ನಷ್ಟವಿಲ್ಲದೇ 5 ಓವರ್ ಗಳಲ್ಲಿ 29 ರನ್ ಗಳಿಸಿದೆ.

ವಿಶೇಷವೆಂದರೆ ಈ ಪಂದ್ಯಕ್ಕೆ ನ್ಯೂಜಿಲೆಂಡ್ ಖಾಯಂ ನಾಯಕ, ಸ್ಟಾರ್ ಬ್ಯಾಟಿಗ ಕೇನ್ ವಿಲಿಯಮ್ಸನ್ ಕಮ್ ಬ್ಯಾಕ್ ಮಾಡಿದ್ದಾರೆ. ಕೇನ್ ಗೆ ಈ ವಿಶ್ವಕಪ್ ನಲ್ಲಿ ಇದು ಎರಡನೆಯ ಪಂದ್ಯ. ಗಾಯದಿಂದಾಗಿ ಅವರು ಇದುವರೆಗೆ ಆಡುವ ಬಳಗದಿಂದ ಹೊರಗುಳಿದಿದ್ದರು. ಆದರೆ ಮಹತ್ವದ ಪಂದ್ಯಕ್ಕೆ ತಂಡಕ್ಕೆ ಪುನರಾಗಮನ ಮಾಡಿರುವುದು ತಂಡದ ಬಲ ಹೆಚ್ಚಿಸಿದೆ. ಇಂದು ಗೆದ್ದರೆ ಕಿವೀಸ್ ನ್ಯೂಜಿಲೆಂಡ್ ಸೆಮಿಫೈನಲ್ ಹಾದಿ ಸುಗಮವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವಕಪ್ ನಿಂದ ಹೊರಬಿದ್ದ ಹಾರ್ದಿಕ್ ಪಾಂಡ್ಯ: ಕನ್ನಡಿಗನಿಗೆ ಒಲಿದ ಅದೃಷ್ಟ