Publish Date: Sat, 04 Nov 2023 (08:20 IST)
Updated Date: Sat, 04 Nov 2023 (08:37 IST)
ಹೈದರಾಬಾದ್: ಅಪಘಾತದಿಂದ ಚೇತರಿಸಿಕೊಂಡಿರುವ ಟೀಂ ಇಂಡಿಯಾ ಕ್ರಿಕೆಟಿಗ ರಿಷಬ್ ಪಂತ್ ಇದೀಗ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.
ರಿಷಬ್ ಗೆ ಇನ್ನೊಬ್ಬ ದೆಹಲಿ ಮೂಲದ ಕ್ರಿಕೆಟಿಗ ಅಕ್ಸರ್ ಪಟೇಲ್ ಸಾಥ್ ನೀಡಿದ್ದಾರೆ. ಇಬ್ಬರೂ ನಿನ್ನೆ ತಿಮ್ಮಪ್ಪನ ದರ್ಶನ ಪಡೆದರು. ಇಬ್ಬರೂ ಗಾಯದಿಂದಾಗಿ ಸದ್ಯಕ್ಕೆ ಟೀಂ ಇಂಡಿಯಾದಿಂದ ಹೊರಗಿದ್ದಾರೆ. ಹೀಗಾಗಿ ಕ್ರಿಕೆಟ್ ಕಣಕ್ಕೆ ಮರಳುವ ಮೊದಲು ತಿಮ್ಮಪ್ಪನಿಗೆ ಪೂಜೆ ಸಲ್ಲಿಸಿದ್ದಾರೆ.
ರಿಷಬ್ ಗೆ ಅಪಘಾತದಿಂದ ಗಾಯವಾಗಿದ್ದರೆ, ಅಕ್ಸರ್ ಏಷ್ಯಾ ಕಪ್ ಪಂದ್ಯದ ವೇಳೆ ಗಾಯ ಮಾಡಿಕೊಂಡಿದ್ದರು. ರಿಷಬ್ ಡಿಸೆಂಬರ್ ನಲ್ಲಿ ದೇಶೀಯ ಕ್ರಿಕೆಟ್ ಮೂಲಕ ಮತ್ತೆ ಸಕ್ರಿಯ ಕ್ರಿಕೆಟ್ ಗೆ ಮರಳು ನಿರೀಕ್ಷೆಯಿದೆ. ಇತ್ತ ಅಕ್ಸರ್ ಪಟೇಲ್ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿದ್ದರೂ ಗಾಯದಿಂದಾಗಿ ದುರದೃಷ್ಟವಶಾತ್ ಕೊನೆಯ ಕ್ಷಣದಲ್ಲಿ ಕೂಟದಿಂದ ಹೊರಗುಳಿಯಬೇಕಾಯಿತು.