Publish Date: Thu, 02 Nov 2023 (13:52 IST)
Updated Date: Thu, 02 Nov 2023 (13:53 IST)
ಮುಂಬೈ: ಶ್ರೀಲಂಕಾ ವಿರುದ್ಧ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಕ್ಕೆ ಮೊದಲು ಟೀಂ ಇಂಡಿಯಾ ಆಟಗಾರರನ್ನು ನೋಡಲು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಮೈದಾನಕ್ಕೆ ಬಂದಿದ್ದಾರೆ.
ಟಾಸ್ ಗೆ ಮುನ್ನ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿದ್ದ ಟೀಂ ಇಂಡಿಯಾ ಆಟಗಾರರ ಜೊತೆ ಸಚಿನ್ ಮಾತುಕತೆ ನಡೆಸಿ ಆಟಗಾರರಿಗೆ ಚಿಯರ್ ಅಪ್ ಮಾಡಿದ್ದಾರೆ.
ಸಚಿನ್ ರನ್ನು ಮೈದಾನದಲ್ಲಿ ನೋಡುತ್ತಿದ್ದಂತೇ ಪ್ರೇಕ್ಷಕರು ಹರ್ಷೋದ್ಗಾರ ಮಾಡಿದ್ದಾರೆ. ನಿನ್ನೆಯಷ್ಟೇ ಇಲ್ಲಿ ಸಚಿನ್ ಪ್ರತಿಮೆ ಅನಾವರಣಗೊಂಡಿತ್ತು. ತಮ್ಮ ತವರಿನಲ್ಲಿ ಟೀಂ ಇಂಡಿಯಾ ಆಟಗಾರರು ವಿಶ್ವಕಪ್ ಪಂದ್ಯವಾಡುವುದನ್ನು ನೋಡಲು ಖುದ್ದು ಸಚಿನ್ ಮೈದಾನಕ್ಕೆ ಬಂದಿದ್ದಾರೆ.