ಮುಂಬೈ: ಏಕದಿನ ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾಗೆ ಈಗ ಸೆಮಿಫೈನಲ್ ಗೇರಲು ಮಾಡು ಇಲ್ಲವೇ ಮಡಿ ಎಂಬ ಪರಿಸ್ಥಿತಿ ಇರುವಾಗಲೇ ಸ್ಟಾರ್ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್ ವೆಲ್ ರೂಪದಲ್ಲಿ ಆಘಾತ ಎದುರಾಗಿದೆ.
ಗ್ಲೆನ್ ಮ್ಯಾಕ್ಸ್ ವೆಲ್ ಕೆಳ ಕ್ರಮಾಂಕದಲ್ಲಿ ಆಸೀಸ್ ತಂಡಕ್ಕೆ ಸ್ಪೋಟಕ ಬ್ಯಾಟಿಂಗ್ ಮೂಲಕ ಬಲ ತುಂಬುತ್ತಾರೆ. ನೆದರ್ಲ್ಯಾಂಡ್ಸ್ ವಿರುದ್ಧ ಅವರು ಸಿಡಿಸಿದ ದಾಖಲೆಯ ಶತಕ ಮರೆಯುವಂತೇ ಇಲ್ಲ.
ಆದರೆ ಇದೀಗ ಗಾಲ್ಫ್ ಕಾರ್ಟ್ ನಿಂದ ಬಿದ್ದು ಮುಖ, ಕಾಲಿಗೆ ಗಾಯ ಮಾಡಿಕೊಂಡಿದ್ದು, ನವಂಬರ್ 4 ರಂದು ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಮಹತ್ವದ ಪಂದ್ಯಕ್ಕೆ ಗೈರಾಗಲಿದ್ದಾರೆ. ಅವರ ಅನುಪಸ್ಥಿತಿ ಈ ಮಹತ್ವದ ಪಂದ್ಯದಲ್ಲಿ ಆಸ್ಟ್ರೇಲಿಯಾಗೆ ಬಹುವಾಗಿ ಕಾಡುವುದಂತೂ ಖಂಡಿತಾ.