Publish Date: Thu, 28 Sep 2023 (08:01 IST)
Updated Date: Thu, 28 Sep 2023 (08:03 IST)
ರಾಜ್ ಕೋಟ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಏಕದಿನ ಪಂದ್ಯದ ವೇಳೆ ಆಸ್ಟ್ರೇಲಿಯಾ ಬ್ಯಾಟಿಗರು ರಾಜ್ ಕೋಟ್ ಮೈದಾನದ ಬಿಸಿಲಿನ ತಾಪಕ್ಕೆ ಸುಸ್ತಾದರು.
ಆಸೀಸ್ ನಿನ್ನೆ ಮೊದಲು ಬ್ಯಾಟಿಂಗ್ ಮಾಡಿ ರನ್ ಹೊಳೆಯನ್ನೇ ಹರಿಸಿತ್ತು. ಆದರೆ ಬ್ಯಾಟಿಗ ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್ ವೆಲ್ ಬಿಸಿಲಿನ ಝಳ ತಡೆಯಲಾರದೇ ಐಸ್ ಪ್ಯಾಕ್ ನ ಮೊರೆ ಹೋದರು.
ಮೈದಾನದಲ್ಲೇ ಕುರ್ಚಿ ಮೇಲೆ ಕೂತ ಸ್ಟೀವ್ ಸ್ಮಿತ್ ಗೆ ತಂಡದ ಸಹಾಯಕ ಸಿಬ್ಬಂದಿಗೆ ಐಸ್ ಪ್ಯಾಕ್ ನ ನೆರವು ನೀಡಿದರು. ಕ್ರಿಕೆಟಿಗರು ಪದೇ ಪದೇ ನೀರು ಕುಡಿದು ಡಿಹೈಡ್ರೇಷನ್ ಆಗದಂತೆ ನೋಡಿಕೊಂಡರು.