ಲಕ್ನೋ: ಏಕದಿನ ವಿಶ್ವಕಪ್ ಕ್ರಿಕೆಟ್ ನಲ್ಲಿ ಯಾಕೋ ಆಸ್ಟ್ರೇಲಿಯಾ ಎಲ್ಲಾ ವಿಭಾಗಗಳಲ್ಲಿ ವಿಫಲವಾಗುತ್ತಿದೆ. ಭಾರತದ ವಿರುದ್ಧ ಸೋಲಿನ ಬಳಿಕ ಇದೀಗ ದ.ಆಫ್ರಿಕಾ ವಿರುದ್ಧವೂ 134 ರನ್ ಗಳ ಹೀನಾಯ ಸೋಲು ಕಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ದ.ಆಫ್ರಿಕಾ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 311 ರನ್ ಗಳಿಸಿತ್ತು. ಆಸೀಸ್ ಗೆ ಸ್ಪಿನ್ನರ್ ಗಳ ಕೊರತೆ ಮತ್ತೆ ಕಾಡಿತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಕೇವಲ 177 ರನ ್ಗಳಿಗೆ ಆಲೌಟ್ ಆಯಿತು. ಮತ್ತೆ ಬ್ಯಾಟಿಂಗ್ ಕೂಡಾ ಕೈ ಕೊಟ್ಟಿತು. ಲಬುಶೇನ್ ಮಾತ್ರ 46 ರನ್ ಗಳಿಸಿದ್ದು ಬಿಟ್ಟರೆ ಉಳಿದೆಲ್ಲಾ ಘಟಾನುಘಟಿಗಳು ವಿಫಲರಾದರು.
ಇದರೊಂದಿಗೆ ಭಾರತದ ವಿರುದ್ಧ ಸೋತ ಆಸ್ಟ್ರೇಲಿಯಾ ಆಫ್ರಿಕಾ ವಿರುದ್ಧವೂ ಸೋತು ಮೂರು ಪಂದ್ಯಗಳ ಪೈಕಿ ಎರಡನ್ನು ಸೋತಂತಾಗಿದೆ.