Publish Date: Thu, 12 Oct 2023 (08:50 IST)
Updated Date: Thu, 12 Oct 2023 (08:54 IST)
ಲಕ್ನೋ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಇಂದು ಎರಡು ಪ್ರಬಲ ತಂಡಗಳ ನಡುವೆ ಕಾದಾಟ ನಡೆಯಲಿದೆ. ಆಸ್ಟ್ರೇಲಿಯಾ-ದ.ಆಫ್ರಿಕಾ ನಡುವೆ ಇಂದಿನ ಪಂದ್ಯ ನಡೆಯಲಿದೆ.
ಏಕದಿನ ವಿಶ್ವಕಪ್ ಗೆ ಮೊದಲು ನಡೆದಿದ್ದ ಎರಡು ತಂಡಗಳ ಏಕದಿನ ಸರಣಿಯಲ್ಲಿ ಆಫ್ರಿಕಾ, ಆಸ್ಟ್ರೇಲಿಯಾಗೆ ತಕ್ಕ ಠಕ್ಕರ್ ನೀಡಿತ್ತು. ಹೀಗಾಗಿ ಆಸೀಸ್ ಗೆ ಆಫ್ರಿಕಾ ಕಠಿಣ ಪೈಪೋಟಿ ಒಡ್ಡಲಿದೆ.
ಈ ಏಕದಿನ ವಿಶ್ವಕಪ್ ಕೂಟದಲ್ಲಿ ಕಳೆದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಗೆಲುವು ಕಂಡಿತ್ತು. ಆಸ್ಟ್ರೇಲಿಯಾ ಕಳೆದ ಪಂದ್ಯದಲ್ಲಿ ಭಾರತದ ವಿರುದ್ಧ ಬ್ಯಾಟಿಂಗ್ ಕಳೆಗುಂದಿತ್ತು. ಸೂಕ್ತ ಸ್ಪಿನ್ನರ್ ಗಳ ಕೊರತೆ ಆಸೀಸ್ ಗೆ ಕಾಡುತ್ತಿದೆ. ಇಂದಿನ ಪಂದ್ಯದಲ್ಲಿ ಗೆಲುವಿನ ಹಳಿಗೆ ಮರಳುವ ಸವಾಲು ಎದುರಾಗಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಪ್ರಬಲ ಪೈಪೋಟಿ ಎದುರಾಗಬಹುದು. ಈ ಪಂದ್ಯ ಮಧ್ಯಾಹ್ನ 2 ಗಂಟೆಗೆ ಆರಂಭವಾಗುವುದು.