Publish Date: Wed, 11 Oct 2023 (20:42 IST)
Updated Date: Wed, 11 Oct 2023 (20:46 IST)
ನವದೆಹಲಿ: ಅಫ್ಘಾನಿಸ್ತಾನ ವಿರುದ್ಧದ ಏಕದಿನ ವಿಶ್ವಕಪ್ ಪಂದ್ಯದ ನಡುವೆ ವಿಶೇಷ ಘಟನೆಯೊಂದು ನಡೆಯಿತು. ಐಪಿಎಲ್ ವೇಳೆ ಮಾತಿನ ಚಕಮಕಿ ನಡೆಸಿದ್ದ ಅಫ್ಘಾನಿಸ್ತಾನ ಬೌಲರ್ ನವೀನ್ ಉಲ್ ಹಕ್, ಟೀಂ ಇಂಡಿಯಾ ದಿಗ್ಗಜ ವಿರಾಟ್ ಕೊಹ್ಲಿ ಜೊತೆಗಿನ ವೈಮನಸ್ಯ ಮರೆತು ಪ್ಯಾಚ್ ಅಪ್ ಮಾಡಿಕೊಂಡರು.
ರೋಹಿತ್ ಔಟಾಗಿ ಪೆವಿಲಿಯನ್ ಗೆ ಮರಳುತ್ತಿರುವಾಗ ಕೊಹ್ಲಿ ಬಳಿ ಬಂದ ನವೀನ್ ಶೇಕ್ ಹ್ಯಾಂಡ್ ಮಾಡಿ ಉಭಯ ಕುಶಲೋಪರಿ ಮಾತನಾಡಿದರು. ಈ ವೇಳೆ ಕೊಹ್ಲಿ ಕೂಡಾ ನವೀನ್ ಬೆನ್ನು ತಟ್ಟಿ ನಗುತ್ತಲೇ ಪ್ರತಿಕ್ರಿಯಿಸಿದರು.
ಇಂದು ಅಫ್ಘಾನಿಸ್ತಾನ ಬ್ಯಾಟಿಂಗ್ ಮಾಡುತ್ತಿದ್ದಾಗ ನವೀನ್ ಕ್ರೀಸ್ ನಲ್ಲಿದ್ದಷ್ಟೂ ಹೊತ್ತು ಅಭಿಮಾನಿಗಳು ಕೊಹ್ಲಿ ಹೆಸರೆತ್ತಿ ಕಿಚಾಯಿಸುತ್ತಿದ್ದರು. ಆದರೆ ನವೀನ್-ಕೊಹ್ಲಿ ಪ್ಯಾಚ್ ಅಪ್ ಆಗುತ್ತಿದ್ದಂತೇ ಅದೇ ಪ್ರೇಕ್ಷಕರು ಹರ್ಷೋದ್ಗಾರ ಮಾಡಿ ಸ್ವಾಗತಿಸಿದರು.