Select Your Language

Notifications

webdunia
webdunia
webdunia
webdunia

ಏಕದಿನ ವಿಶ್ವಕಪ್ ಕ್ರಿಕೆಟ್: ನವೀನ್ ಉಲ್ ಹಕ್ ಬ್ಯಾಟಿಂಗ್, ಕೊಹ್ಲಿ ಎಂದು ಕಿಚಾಯಿಸಿದ ಫ್ಯಾನ್ಸ್!

ಏಕದಿನ ವಿಶ್ವಕಪ್ ಕ್ರಿಕೆಟ್: ನವೀನ್ ಉಲ್ ಹಕ್ ಬ್ಯಾಟಿಂಗ್, ಕೊಹ್ಲಿ ಎಂದು ಕಿಚಾಯಿಸಿದ ಫ್ಯಾನ್ಸ್!
ನವದೆಹಲಿ , ಬುಧವಾರ, 11 ಅಕ್ಟೋಬರ್ 2023 (18:11 IST)
Photo Courtesy: Twitter
ನವದೆಹಲಿ: ಐಪಿಎಲ್ ನಲ್ಲಿ ಕೊಹ್ಲಿ ಜೊತೆ ನಡೆಸಿದ ಸಂಘರ್ಷದ ಫಲವನ್ನು ಅಫ್ಘಾನಿಸ್ತಾನ ಕ್ರಿಕೆಟಿಗ ನವೀನ್ ಉಲ್ ಹಕ್ ಈಗಲೂ ಅನುಭವಿಸುತ್ತಿದ್ದಾರೆ.

ನವೀನ್ ಭಾರತದ ಯಾವುದೇ ಮೈದಾನಕ್ಕೆ ಹೋದರೂ ಅವರನ್ನು ಕೊಹ್ಲಿ ಹೆಸರೆತ್ತಿ ಕರೆದು ಕಿಚಾಯಿಸಲಾಗುತ್ತದೆ. ಇಂದೂ ಭಾರತದ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ನವೀನ್ ಉಲ್ ಹಕ್ ಬ್ಯಾಟಿಂಗ್ ಮಾಡುತ್ತಿದ್ದಾಗ ದೆಹಲಿಯ ಮೈದಾನದಲ್ಲಿ ಕೊಹ್ಲಿ ಹೆಸರೆತ್ತಿ ಕೂಗಿ ಅಭಿಮಾನಿಗಳು ಕಾಲೆಳೆದಿದ್ದಾರೆ.

ಹೇಳಿ ಕೇಳಿ ದೆಹಲಿ ಕೊಹ್ಲಿಯ ತವರು ನೆಲ. ನವೀನ್ ಬ್ಯಾಟಿಂಗ್ ಮಾಡುವಾಗ ಕೊಹ್ಲಿ…ಕೊಹ್ಲಿ ಎಂದು ಅಭಿಮಾನಿಗಳು ಜೋರಾಗಿ ಕರೆದು ನವೀನ್ ಗೆ ಟಾಂಗ್ ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಏಕದಿನ ವಿಶ್ವಕಪ್ ಕ್ರಿಕೆಟ್: ಟೀಂ ಇಂಡಿಯಾಗೆ ಸವಾಲಿನ ಗುರಿ ಕೊಟ್ಟ ಅಫ್ಘಾನಿಸ್ತಾನ