Select Your Language

Notifications

webdunia
webdunia
webdunia
webdunia

ಏಕದಿನ ವಿಶ್ವಕಪ್: ದ.ಆಫ್ರಿಕಾ-ಭಾರತ ನಡುವೆ ನಂ.1 ಪಟ್ಟಕ್ಕೆ ಪೈಪೋಟಿ

ಏಕದಿನ ವಿಶ್ವಕಪ್: ದ.ಆಫ್ರಿಕಾ-ಭಾರತ ನಡುವೆ ನಂ.1 ಪಟ್ಟಕ್ಕೆ ಪೈಪೋಟಿ
ಪುಣೆ , ಗುರುವಾರ, 2 ನವೆಂಬರ್ 2023 (10:20 IST)
ಪುಣೆ: ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ಟೀಂ ಇಂಡಿಯಾ ಮತ್ತು ದ.ಆಫ್ರಿಕಾ ನಡುವೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕಾಗಿ ಭಾರೀ ಪೈಪೋಟಿ ಏರ್ಪಟ್ಟಿದೆ.

ನಿನ್ನೆ ನ್ಯೂಜಿಲೆಂಡ್ ವಿರುದ್ಧ ಗೆದ್ದ ಆಫ್ರಿಕಾ ಮತ್ತೆ ನಂ.1 ಪಟ್ಟಕ್ಕೇರಿದೆ. ಇದಕ್ಕೆ ಮೊದಲು ಟೀಂ ಇಂಡಿಯಾ ನಂ.1 ಸ್ಥಾನದಲ್ಲಿತ್ತು. ಪಾಕಿಸ್ತಾನ ವಿರುದ್ಧ ಗೆದ್ದ ದ.ಆಫ್ರಿಕಾ ನಂ.1 ಪಟ್ಟಕ್ಕೇರಿತ್ತು. ಆದರೆ ಮರುದಿನವೇ ಇಂಗ್ಲೆಂಡ್ ವಿರುದ್ಧ ಗೆದ್ದ ಟೀಂ ಇಂಡಿಯಾ ಮತ್ತೆ ನಂ.1 ಸ್ಥಾನ ವಶಪಡಿಸಿಕೊಂಡಿತ್ತು. ಇದೀಗ ನ್ಯೂಜಿಲೆಂಡ್ ವಿರುದ್ಧ ಗೆದ್ದ ಆಫ್ರಿಕಾ ಮತ್ತೆ ನಂ.1 ಸ್ಥಾನ ತನ್ನದಾಗಿಸಿಕೊಂಡಿದೆ. ಆದರೆ ಇಂದು ಶ್ರೀಲಂಕಾ ವಿರುದ್ಧ ಭಾರತ ಗೆದ್ದರೆ ಮತ್ತೆ ಅಗ್ರಸ್ಥಾನ ಅತಿಥೇಯ ತಂಡದ್ದಾಗಲಿದೆ.

ಆದರೆ ರನ್ ರೇಟ್ ಆಧಾರದಲ್ಲಿ ದ.ಆಫ್ರಿಕಾ ಮುಂದಿದೆ. ಅಂಕಗಳ ವಿಚಾರದಲ್ಲಿ ಭಾರತ ಮುಂದಿದೆ. ಭಾರತ ಇದುವರೆಗೆ ಆಡಿದ 6 ಪಂದ್ಯಗಳಿಂದ ಆರನ್ನೂ ಗೆದ್ದು 12 ಅಂಕ ಸಂಪಾದಿಸಿದೆ. ಆಫ್ರಿಕಾ 7 ಪಂದ್ಯಗಳಿಂದ 6 ಗೆಲುವಿನೊಂದಿಗೆ 12 ಅಂಕ ಹೊಂದಿದೆ. ಮುಂದೆ ಈ ಎರಡೂ ತಂಡಗಳು ನವಂಬರ್ 5 ರಂದು ಸೆಣಸಾಡಲಿದ್ದು, ಆ ಪಂದ್ಯದಲ್ಲಿ ಗೆದ್ದ ತಂಡ ನಂ.1 ಸ್ಥಾನವನ್ನು ತನ್ನದಾಗಿಸಿಕೊಳ್ಳಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಏಕದಿನ ವಿಶ್ವಕಪ್: ರನ್ ರೇಟ್ ಹೆಚ್ಚಿಸಿಕೊಳ್ಳಲು ಟೀಂ ಇಂಡಿಯಾಗೆ ಇಂದು ಬೆಸ್ಟ್ ಚಾನ್ಸ್