Publish Date: Thu, 02 Nov 2023 (08:30 IST)
Updated Date: Thu, 02 Nov 2023 (09:01 IST)
ಮುಂಬೈ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ನಲ್ಲಿ ಇಂದು ಟೀಂ ಇಂಡಿಯಾ ಮುಂಬೈನ ವಾಂಖೆಡೆ ಮೈದಾನದಲ್ಲಿ ಶ್ರೀಲಂಕಾ ವಿರುದ್ಧ ಪಂದ್ಯವಾಡಲಿದೆ.
ಈಗಾಗಲೇ ಆರಕ್ಕೆ ಆರೂ ಪಂದ್ಯಗಳನ್ನು ಗೆದ್ದಿರುವ ಟೀಂ ಇಂಡಿಯಾ ಸೆಮಿಫೈನಲ್ ಹಾದಿ ಭದ್ರಪಡಿಸಿದೆ. ಆದರೆ ಅಧಿಕೃತವಾಗಿ ಸೆಮಿಫೈನಲ್ ಎಂಟ್ರಿ ಕೊಡಲು ಇಂದಿನ ಪಂದ್ಯವನ್ನೂ ಗೆಲ್ಲಬೇಕಿದೆ. ಇಂದು ಭಾರೀ ಅಂತರದಲ್ಲಿ ಗೆದ್ದರೆ ತಂಡದ ರನ್ ರೇಟ್ ಹೆಚ್ಚಲಿದೆ.
ಶ್ರೀಲಂಕಾ ತಂಡ ಈ ವಿಶ್ವಕಪ್ ನಲ್ಲಿ ಇದುವರೆಗೆ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಆರು ಪಂದ್ಯಗಳಲ್ಲಿ ಕೇವಲ 2 ಗೆಲುವು, 4 ಸೋಲು ಕಂಡಿದೆ. ಹೀಗಾಗಿ ಸೆಮಿಫೈನಲ್ ನಿಂದ ಹೊರಬಿದ್ದಿದೆ. ಇಂಗ್ಲೆಂಡ್, ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡಕ್ಕೆ ಮಣ್ಣು ಮುಕ್ಕಿಸಿದ ಟೀಂ ಇಂಡಿಯಾ ಎದುರು ಪೈಪೋಟಿ ನೀಡುವುದು ಸುಲಭದ ಮಾತಲ್ಲ. ಈ ಪಂದ್ಯ ಮಧ‍್ಯಾಹ್ನ 2 ಗಂಟೆಗೆ ನಡೆಯಲಿದೆ.