Publish Date: Thu, 02 Nov 2023 (13:44 IST)
Updated Date: Thu, 02 Nov 2023 (13:47 IST)
ಮುಂಬೈ: ಭಾರತ ಮತ್ತು ಶ್ರೀಲಂಕಾ ನಡುವಿನ ಐಸಿಸಿ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ.
ಕಳೆದ ಪಂದ್ಯದಲ್ಲೂ ಭಾರತ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿತ್ತು. ಆದರೆ ಕಳೆದ ಪಂದ್ಯದಲ್ಲಿ ಬ್ಯಾಟಿಂಗ್ ಕೈಕೊಟ್ಟಿತ್ತು. ಇಂದೂ ಅದೇ ತಂಡದೊಂದಿಗೆ ಭಾರತ ಕಣಕ್ಕಿಳಿದಿದೆ. ರೋಹಿತ್ ಆಡುವ ಬಳಗದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ರೋಹಿತ್ ಗೆ ಇದು ತವರಿನಲ್ಲಿ ನಡೆಯುವ ಪಂದ್ಯವಾಗಿರುವುದರಿಂದ ವಿಶೇಷವಾಗಿದೆ.
ಅತ್ತ ಶ್ರೀಲಂಕಾ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿದಿದೆ. ಧನಂಜಯ ಡಿ ಸಿಲ್ವ ಬದಲಿಗೆ ಹೇಮಂತ ಅವರನ್ನು ಕಣಕ್ಕಿಳಿಸಿದೆ. ಉಳಿದಂತೆ ಯಾವುದೇ ಬದಲಾವಣೆಯಿಲ್ಲ.