Publish Date: Thu, 02 Nov 2023 (08:50 IST)
Updated Date: Thu, 02 Nov 2023 (09:12 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಶುಬ್ಮನ್ ಗಿಲ್ ಮತ್ತು ಸಾರಾ ತೆಂಡುಲ್ಕರ್ ಡೇಟಿಂಗ್ ರೂಮರ್ಸ್ ನಡುವೆ ಇಬ್ಬರೂ ಲೇಟ್ ನೈಟ್ ಪಾರ್ಟಿಯೊಂದರಲ್ಲಿ ಒಟ್ಟಿಗೇ ಪಾಲ್ಗೊಂಡಿದ್ದು ಕ್ಯಾಮರಾ ಕಣ್ಣಿಗೆ ಬಿದ್ದಿದೆ.
ಅಂಬಾನಿ ಕಲ್ಚರಲ್ ಸೆಂಟರ್ ನಲ್ಲಿ ನಡೆದ ಪಾರ್ಟಿಯಲ್ಲಿ ಇಬ್ಬರೂ ಪಾಲ್ಗೊಂಡಿದ್ದರು. ಆದರೆ ಹೊರಗಡೆ ಕ್ಯಾಮರಾ ಮ್ಯಾನ್ ಗಳಿರುವುದನ್ನು ಗುರುತಿಸಿದ ಸಾರಾ ಮತ್ತು ಗಿಲ್ ಬೇಕೆಂದೇ ಜೊತೆಯಾಗಿ ಬರುವುದನ್ನು ತಪ್ಪಿಸಿಕೊಂಡರು.
ಗಿಲ್ ಮೊದಲು ಕಾರು ಏರಿ ಹೊರಟರೆ ಕೆಲವು ನಿಮಿಷಗಳ ನಂತರ ಸಾರಾ ಕಾರಿನಲ್ಲಿ ಮನೆಗೆ ತೆರಳಿದ್ದಾರೆ. ಇಬ್ಬರೂ ಮತ್ತೆ ಗಾಸಿಪ್ ಗಳಿಗೆ ಆಹಾರವಾಗುವುದು ಬೇಡ ಎಂಬ ನಿಟ್ಟಿನಲ್ಲಿ ಒಟ್ಟಿಗೇ ಕ್ಯಾಮರಾ ಮುಂದೆ ಕಾಣಿಸಿಕೊಳ್ಳದಂತೆ ಜಾಣತನ ಮೆರೆದಿದ್ದಾರೆ.