ಮುಂಬೈ: ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ತಂಡವನ್ನು ಪ್ರತಿನಿಧಿಸುವುದು ಯಾವುದೇ ಆಟಗಾರನ ಕನಸು. ಆದರೆ ಆ ಕನಸು ಅರ್ಧಕ್ಕೇ ಭಗ್ನಗೊಂಡರೆ ಯಾವುದೇ ಕ್ರಿಕೆಟಿಗನಿಗೂ ನಿರಾಸೆಯಾಗಿಯೇ ಆಗುತ್ತದೆ.
ಇದೀಗ ಹಾರ್ದಿಕ್ ಪಾಂಡ್ಯ ಕೂಡಾ ಅದೇ ನೋವಿನಲ್ಲಿದ್ದಾರೆ. ಕಾಲಿನ ಗಾಯದಿಂದಾಗಿ ಏಕದಿನ ವಿಶ್ವಕಪ್ ನಿಂದಲೇ ಹಾರ್ದಿಕ್ ಹೊರಗುಳಿಯಬೇಕಿದೆ. ಈ ನೋವನ್ನು ಅವರು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.
ವಿಶ್ವಕಪ್ ನ ಉಳಿದ ಪಂದ್ಯಗಳಿಂದ ಹೊರಗುಳಿಯಬೇಕಾಗಿದೆ ಎಂಬ ವಿಚಾರವನ್ನು ನನಗೆ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತಿದೆ. ಆದರೆ ನಾನು ಪ್ರತೀ ಹಂತದಲ್ಲೂ ಚಿಯರ್ ಮಾಡುತ್ತಾ ತಂಡದೊಂದಿಗೆ ಯಾವತ್ತೂ ಇರುತ್ತೇನೆ. ನಿಮ್ಮೆಲ್ಲರ ಪ್ರೋತ್ಸಾಹ, ಪ್ರೀತಿ, ವಿಶ್ವಾಸಕ್ಕೆ ಧನ್ಯವಾದಗಳು. ಈ ತಂಡ ವಿಶೇಷವಾಗಿದೆ ಮತ್ತು ನನಗೆ ಗೊತ್ತು ನೀವೆಲ್ಲರೂ ಹೆಮ್ಮೆಪಡುವಂತೆ ಈ ತಂಡ ಮಾಡುತ್ತದೆ ಎಂದು ಹಾರ್ದಿಕ್ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.