Select Your Language

Notifications

webdunia
webdunia
webdunia
webdunia

ವಾಂಖೆಡೆ ಮೈದಾನದಲ್ಲಿ ಮೂರ್ತಿ ರೂಪದಲ್ಲಿರುವ ಸಚಿನ್ ಶಾಟ್ ಹೊಡೆದಿದ್ದು ಯಾವಾಗ ಗೊತ್ತಾ?

ವಾಂಖೆಡೆ ಮೈದಾನದಲ್ಲಿ ಮೂರ್ತಿ ರೂಪದಲ್ಲಿರುವ ಸಚಿನ್ ಶಾಟ್ ಹೊಡೆದಿದ್ದು ಯಾವಾಗ ಗೊತ್ತಾ?
ಮುಂಬೈ , ಶನಿವಾರ, 4 ನವೆಂಬರ್ 2023 (11:32 IST)
Photo Courtesy: Twitter
ಮುಂಬೈ: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಅವರ ಪ್ರತಿಮೆಯನ್ನು ಸ್ಥಾಪನೆ ಮಾಡಿ ಲೋಕಾರ್ಪಣೆ ಮಾಡಲಾಗಿದೆ.

ಸಚಿನ್ ಲಾಫ್ಟೆಡ್ ಶಾಟ್ ಹೊಡೆಯುವ ಭಂಗಿಯಲ್ಲಿರುವ ಈ ಪ್ರತಿಮೆಯನ್ನು ಸ್ವತಃ ಸಚಿನ್ ಅನಾವರಣಗೊಳಿಸಿದ್ದರು. ಯುವ ಕ್ರಿಕೆಟಿಗರಿಗೆ ಸ್ಪೂರ್ತಿ ಸಿಗಲಿ ಎನ್ನುವ ಕಾರಣಕ್ಕೆ ಮೈದಾನದಲ್ಲಿ ಎಲ್ಲರಿಗೂ ಕಾಣುವಂತೇ ಪ್ರತಿಮೆ ಸ್ಥಾಪಿಸಲಾಗಿದೆ.

ಅಂದ ಹಾಗೆ, ಈ ಪ್ರತಿಮೆಯಲ್ಲಿ ಸಚಿನ್ ಹೊಡೆದ ಶಾಟ್ ಅವರು ತಮ್ಮ ವೃತ್ತಿ ಜೀವನದಲ್ಲಿ ಹೊಡೆದಿದ್ದು ಯಾವಾಗ ಗೊತ್ತಾ? ಸಚಿನ್ ಅನೇಕ ಬಾರಿ ಇಂತಹದ್ದೇ ಶಾಟ್ ಹೊಡೆದಿರಬಹುದು. ಆದರೆ ಶಾರ್ಜಾದಲ್ಲಿ 1998 ರಲ್ಲಿ ಮೈಕಲ್ ಕಾಸ್ಪ್ರೀವಿಕ್ ಬೌಲಿಂಗ್ ನಲ್ಲಿ ಈ ಐತಿಹಾಸಿಕ ಶಾಟ್ ಮೂಲಕ ಸಿಕ್ಸರ್ ಗಳಿಸಿದ್ದರು. ಈ ಪಂದ್ಯದಲ್ಲಿ ಸಚಿನ್ 134 ರನ್ ಸಿಡಿಸಿದ್ದರು. ಇಂದು ವಾಂಖೆಡೆಯಲ್ಲಿರುವ ಪ್ರತಿಮೆಯ ಭಂಗಿ ನೋಡಿದರೆ ಅದೇ ಶಾಟ್ ಕ್ರಿಕೆಟ್ ಪ್ರೇಮಿಗಳಿಗೆ ನೆನಪಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವಕಪ್ ನಿಂದ ಹೊರಬಿದ್ದ ಹಾರ್ದಿಕ್ ಪಾಂಡ್ಯ: ಕನ್ನಡಿಗನಿಗೆ ಒಲಿದ ಅದೃಷ್ಟ