Select Your Language

Notifications

webdunia
webdunia
webdunia
webdunia

ಏಕದಿನ ವಿಶ್ವಕಪ್: ಚಿನ್ನಸ್ವಾಮಿಯಲ್ಲಿ ರನ್ ಹೊಳೆ

ಏಕದಿನ ವಿಶ್ವಕಪ್: ಚಿನ್ನಸ್ವಾಮಿಯಲ್ಲಿ ರನ್ ಹೊಳೆ
ಬೆಂಗಳೂರು , ಶನಿವಾರ, 4 ನವೆಂಬರ್ 2023 (17:29 IST)
ಬೆಂಗಳೂರು: ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವೆ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಎರಡೂ ತಂಡಗಳೂ ರನ್ ಹೊಳೆ ಹರಿಸಿವೆ.

ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 50 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 401 ರನ್ ಗಳಿಸಿತು. ರಚಿನ್ ರವೀಂದ್ರ 108, ಕೇನ್ ವಿಲಿಯಮ್ಸನ್ 95, ಗ್ಲೆನ್ ಫಿಲಿಪ್ಸ್ 45 ರನ್ ಚಚ್ಚಿದರು. ಪಾಕ್ ಪರ ಮೊಹಮ್ಮದ್ ವಾಸಿಂ ಜ್ಯೂನಿಯರ್ 3 ವಿಕೆಟ್ ಕಬಳಿಸಿದರು.

ಕಿವೀಸ್ ರನ್ ಹೊಳೆ ಮುಗಿಯುತ್ತಿದ್ದಂತೇ ಪಾಕ್ ಅದಕ್ಕಿಂತ ತಾನೇನು ಕಡಿಮೆ ಎನ್ನುವಂತೆ ಅಬ್ಬರಿಸಲು ಶುರು ಮಾಡಿತು. ಕೇವಲ 21.3 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 160 ರನ್ ಚಚ್ಚಿತು. ಆದರೆ ದುರದೃಷ್ಟವಶಾತ್ ಅಷ್ಟರಲ್ಲೇ ಮಳೆ ಸುರಿಯಲು ಆರಂಭವಾಯಿತು. ಇದೀಗ ಹನಿ ಮಳೆಯಾಗುತ್ತಿದ್ದು, ಮಳೆ ನಿಂತರೂ ಓವರ್ ಕಡಿತವಾಗುವ ಸಂಭವವಿದೆ.

ಪಾಕ್ ಪರ ಫಕರ್ ಜಮಾನ್ 69 ಎಸೆತಗಳಲ್ಲಿ 9 ಸಿಕ್ಸರ್ ಸಹಿತ 106 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಅವರಿಗೆ ಸಾಥ್ ನೀಡುತ್ತಿರುವ ನಾಯಕ ಬಾಬರ್ ಅಜಮ್ 41 ರನ್ ಗಳಿಸಿದ್ದಾರೆ. ಪಾಕ್ ರನ್ ವೇಗ ನೋಡಿದರೆ ಯಶಸ್ವಿಯಾಗಿ 400 ರನ್ ಗಳನ್ನು ಚೇಸ್ ಮಾಡಲಿದೆ ಎನಿಸುತ್ತಿತ್ತು. ಆದರೆ ಕುತೂಹಲಕಾರಿ ಘಟ್ಟದಲ್ಲಿ ಮಳೆ ಸುರಿದು ಪಾಕ್ ಓಟಕ್ಕೆ ಕಡಿವಾಣ ಹಾಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಾಂಖೆಡೆ ಮೈದಾನದಲ್ಲಿ ಮೂರ್ತಿ ರೂಪದಲ್ಲಿರುವ ಸಚಿನ್ ಶಾಟ್ ಹೊಡೆದಿದ್ದು ಯಾವಾಗ ಗೊತ್ತಾ?