ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಾಳೆಯಿಂದ ಮೂರನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಮೊದಲ ಎರಡೂ ಪಂದ್ಯಗಳಲ್ಲಿ ಭಾರತೀಯರ ಆಟ ನೋಡಿ ಮೂರನೇ ಪಂದ್ಯಕ್ಕೆ ಇಂಗ್ಲೆಂಡ್ ಹೊಸ ರಣತಂತ್ರ ಹೆಣೆದಿದೆ.
ಮೊದಲ ಪಂದ್ಯವನ್ನು ಟೀಂ ಇಂಡಿಯಾ ಸೋತು ಎರಡನೇ ಪಂದ್ಯವನ್ನು ಗೆದ್ದುಕೊಂಡಿತ್ತು. ಹಾಗಿದ್ದರೂ ಎರಡೂ ಪಂದ್ಯಗಳಲ್ಲಿ ಟೀಂ ಇಂಡಿಯಾ ಬ್ಯಾಟಿಗರಿಗೆ ಇಂಗ್ಲೆಂಡ್ ಬೌಲರ್ ಗಳು ದೊಡ್ಡ ಸವಾಲಾಗಲೇ ಇಲ್ಲ. ಹಾಗೆ ನೋಡಿದರೆ ಟೀಂ ಇಂಡಿಯಾ ಬೌಲರ್ ಗಳಷ್ಟೂ ಇಂಗ್ಲೆಂಡ್ ಬೌಲರ್ ಗಳಿಗೆ ಸಕ್ಸಸ್ ಸಿಗಲಿಲ್ಲ.
ಟೀಂ ಇಂಡಿಯಾ ಯುವ ಪಡೆಯನ್ನು ವೇಗದ ಪಿಚ್ ಮೂಲಕ ಬೆದರಿಸಲು ತಂತ್ರ ಮಾಡಿದ್ದ ಇಂಗ್ಲೆಂಡ್ ಗೆ ತಿರುಗುಬಾಣವಾಗಿತ್ತು. ಹೀಗಾಗಿ ಮೂರನೇ ಪಂದ್ಯದಲ್ಲಿ ಪಿಚ್ ನಲ್ಲಿ ಸ್ವಲ್ಪ ಜೀವಂತಿಕೆಯಿರಬೇಕು ಎಂದು ಇಂಗ್ಲೆಂಡ್ ಕೋಚ್ ಕ್ಯುರೇಟರ್ ಗಳಿಗೆ ತಾಕೀತು ಮಾಡಿದ್ದಾರಂತೆ.
ಹೀಗಾಗಿ ಮೊದಲ ಎರಡು ಪಂದ್ಯಗಳಲ್ಲಿ ಇದ್ದಷ್ಟು ಬ್ಯಾಟಿಂಗ್ ಗೆ ಸಹಕಾರ ಸಿಗದು ಎನ್ನಲಾಗುತ್ತಿದೆ. ಮೂರನೇ ಪಂದ್ಯಕ್ಕೆ ಹಸಿರು ಪಿಚ್ ತಯಾರಿಸಲಾಗಿದ್ದು, ನೀರು ಹಾಯಿಸಿ ವೇಗಿಗಳಿಗೆ ನೆರವಾಗುವಂತೆ ಮಾಡಲಾಗಿದೆ ಎನ್ನಲಾಗಿದೆ. ಇಂಗ್ಲೆಂಡ್ ತಂಡಕ್ಕೆ ವೇಗಿ ಜೋಫ್ರಾ ಆರ್ಚರ್ ಕಮ್ ಬ್ಯಾಕ್ ಮಾಡುತ್ತಿರುವುದು ಪ್ಲಸ್ ಪಾಯಿಂಟ್ ಆದರೆ ಇತ್ತ ಟೀಂ ಇಂಡಿಯಾಗೂ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಕಮ್ ಬ್ಯಾಕ್ ಮಾಡಲಿದ್ದಾರೆ. ಹೀಗಾಗಿ ಈ ಪಂದ್ಯದಲ್ಲಿ ಹೆಚ್ಚು ಪೈಪೋಟಿ ನಿರೀಕ್ಷಿಸಬಹುದು.