Select Your Language

Notifications

webdunia
webdunia
webdunia
webdunia

IND vs ENG: ಲಾರ್ಡ್ಸ್ ಮೈದಾನದಲ್ಲಿ ಟೀಂ ಇಂಡಿಯಾಗಿಲ್ಲ ಅದೃಷ್ಟ

IND vs ENG

Krishnaveni K

ಲಾರ್ಡ್ಸ್ , ಮಂಗಳವಾರ, 8 ಜುಲೈ 2025 (09:57 IST)
Photo Credit: X
ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿದ್ದು, ಈ ಮೈದಾನದಲ್ಲಿ ಟೀಂ ಇಂಡಿಯಾದ ಇತಿಹಾಸ ಸ್ವಲ್ಪವೂ ಚೆನ್ನಾಗಿಲ್ಲ.

ಜುಲೈ 10 ರಿಂದ ಮೂರನೇ ಟೆಸ್ಟ್ ಪಂದ್ಯ ಕ್ರಿಕೆಟ್ ಕಾಶಿ ಎಂದೇ ಕರೆಯಲ್ಪಡುವ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿದೆ. ಇಲ್ಲಿ ಟೀಂ ಇಂಡಿಯಾ ಒಟ್ಟು 19 ಟೆಸ್ಟ್ ಪಂದ್ಯಗಳನ್ನಾಡಿದೆ. ಈ ಪೈಕಿ ಗೆದ್ದಿದ್ದು ಕೇವಲ ಮೂರೇ ಪಂದ್ಯಗಳಲ್ಲಿ.

12 ಬಾರಿ ಟೀಂ ಇಂಡಿಯಾ ಇಲ್ಲಿ ಸೋತಿದೆ. 4 ಬಾರಿ ಡ್ರಾ ಮಾಡಿಕೊಳ್ಳಲು ಯಶಸ್ವಿಯಾಗಿದೆ. ಅದೂ ಕೊನೆಯ ಬಾರಿ  ಟೀಂ ಇಂಡಿಯಾ ಇಲ್ಲಿ ಗೆದ್ದಿದ್ದು 2021 ರಲ್ಲಿ. ಅಂದು ಟೀಂ ಇಂಡಿಯಾ 151 ರನ್ ಗಳ ಭರ್ಜರಿ ಗೆಲುವು ಕಂಡಿತ್ತು.

ಇದೇ ಮೈದಾನದಲ್ಲಿ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಕೂಡಾ ಆಡಿದೆ. ಆದರೆ ಅದನ್ನೂ ಟೀಂ ಇಂಡಿಯಾ ಸೋತಿತ್ತು. ಇದೀಗ ಹಾಲಿ ಸರಣಿಯಲ್ಲಿ ಕಳೆದ ಪಂದ್ಯವನ್ನು ಗೆದ್ದು ಸರಣಿಯಲ್ಲಿ 1-1 ರ ಸಮಬಲ ಸಾಧಿಸಿರುವ ಟೀಂ ಇಂಡಿಯಾ ಲಾರ್ಡ್ಸ್ ನಲ್ಲಿ ಗೆಲ್ಲುವ ವಿಶ್ವಾಸದೊಂದಿಗೆ ಕಣಕ್ಕಿಳಿಯಲಿದೆ. ಆಕಾಶ್ ದೀಪ್, ಮೊಹಮ್ಮದ್ ಸಿರಾಜ್ ಫಾರ್ಮ್ ಜೊತೆಗೆ ಜಸ್ಪ್ರೀತ್ ಬುಮ್ರಾ ವಾಪಸಾತಿ ತಂಡದ ಬೌಲಿಂಗ್ ಬಲ ಹೆಚ್ಚಿಸಲಿದೆ. ಅಲ್ಲದೆ, ಇದೀಗ ಶಭಮನ್ ಗಿಲ್ ನಾಯಕತ್ವದಲ್ಲಿ ಯುವಕರೇ ಹೆಚ್ಚಾಗಿರುವ ಹೊಸ ತಂಡ ಆಡುತ್ತಿದೆ. ಹೀಗಾಗಿ ಹಿಂದಿನ ಕೆಟ್ಟ ದಾಖಲೆಗಳು ಲೆಕ್ಕಕ್ಕೆ ಬರಲ್ಲ ಎನ್ನಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಐಸಿಸಿ ಹೊಸ ಸಿಇಓ ಆಗಿ ಭಾರತೀಯ ಸಂಜೋಗ್ ಗುಪ್ತಾ, ಇವರ ಸಾಧನೆ ಇಲ್ಲಿದೆ