Select Your Language

Notifications

webdunia
webdunia
webdunia
webdunia

IND vs ENG: ಬೇಜ್ ಬಾಲ್ ಕೈ ಬಿಟ್ಟು ಹಳೇ ಸ್ಟೈಲ್ ಗೆ ಮರಳಲಿದೆ ಇಂಗ್ಲೆಂಡ್

IND vs ENG

Krishnaveni K

ಲಾರ್ಡ್ಸ್ , ಮಂಗಳವಾರ, 8 ಜುಲೈ 2025 (11:50 IST)
ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಬೇಜ್ ಬಾಲ್ ಶೈಲಿಯ (ಆಕ್ರಮಣಕಾರೀ ಬ್ಯಾಟಿಂಗ್) ಆಟವಾಡಿ ಕೈ ಸುಟ್ಟುಕೊಂಡಿರುವ ಇಂಗ್ಲೆಂಡ್ ಈಗ ಹಳೆಯ ಶೈಲಿಗೆ ಮರಳಲು ಚಿಂತನೆ ನಡೆಸಿದೆ.

ಇಂಗ್ಲೆಂಡ್ ಹಲವು ಸಮಯದಿಂದ ಬೇಜ್ ಬಾಲ್ ಶೈಲಿಯ ಆಟವಾಡಿ ಸಕ್ಸಸ್ ಕಂಡಿತ್ತು. ಆದರೆ ಭಾರತದ ವಿರುದ್ಧ ಇಂಗ್ಲೆಂಡ್ ಗೆ ಬೇಜ್ ಬಾಲ್ ಶೈಲಿಯಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿಲ್ಲ. ಈ ಹಿಂದೆ ಭಾರತದಲ್ಲೂ ಈ ಶೈಲಿಯ ಆಟದಿಂದ ಸೋಲು ಕಾಣುವಂತಾಗಿತ್ತು.

ಹೀಗಾಗಿ ಈಗ ಬೇಜ್ ಬಾಲ್ ಶೈಲಿಯ ಆಟ ಕೈ ಬಿಟ್ಟು ಹಳೆಯ ಶೈಲಿಗೆ ಮರಳಲು ಚಿಂತನೆ ನಡೆಸಿದೆ. ಮೂರನೇ ಟೆಸ್ಟ್ ಪಂದ್ಯ ಜುಲೈ 10 ರಿಂದ ಲಾರ್ಡ್ಸ್ ನಲ್ಲಿ ನಡೆಯಲಿದೆ. ಈ ಪಂದ್ಯಕ್ಕೂ ವೇಗ ಮತ್ತು ಬ್ಯಾಟಿಂಗ್ ಗೆ ಸಹಕಾರಿಯಾಗುವ ಪಿಚ್ ನಿರ್ಮಾಣವಾಗಲಿದೆ.

ಆದರೆ ಈ ಬಾರಿ ಇಂಗ್ಲೆಂಡ್ ಪರಿಸ್ಥಿತಿಗೆ ತಕ್ಕಂತೆ ಬ್ಯಾಟಿಂಗ್ ಮಾಡಲು ಮುಂದಾಗಿದೆ. ಬೇಜ್ ಬಾಲ್ ಶೈಲಿಯ ಆಟಕ್ಕೆ ಹೊಂದಿಕೊಳ್ಳುವಂತೆ ಪಿಚ್ ಗಳನ್ನು ನಿರ್ಮಿಸಲಾಗುತ್ತಿದೆ. ಆದರೆ ಇಂಗ್ಲೆಂಡ್ ವೇಗಿಗಳು ಹೆಚ್ಚು ಯಶಸ್ಸು ಪಡೆದಿಲ್ಲ. ಹೀಗಾಗಿ ಇಂಗ್ಲೆಂಡ್ ಹಳೆಯ ಶೈಲಿಗೆ ಮರಳಬಹುದು ಎಂಬ ಸುದ್ದಿ ಹರಿದಾಡುತ್ತಿದೆ.


Share this Story:

Follow Webdunia kannada

ಮುಂದಿನ ಸುದ್ದಿ

IND vs ENG: ಲಾರ್ಡ್ಸ್ ಮೈದಾನದಲ್ಲಿ ಟೀಂ ಇಂಡಿಯಾಗಿಲ್ಲ ಅದೃಷ್ಟ