Select Your Language

Notifications

webdunia
webdunia
webdunia
webdunia

ಒಂದೇ ವರ್ಷಕ್ಕೆ ಡೆಲ್ಲಿ ಬಿಟ್ಟು ಈ ತಂಡವನ್ನು ಸೇರಿಕೊಳ್ಳಲಿದ್ದಾರೆ ಕೆಎಲ್ ರಾಹುಲ್

KL Rahul

Krishnaveni K

ಮುಂಬೈ , ಗುರುವಾರ, 28 ಆಗಸ್ಟ್ 2025 (09:51 IST)
ಮುಂಬೈ: ಐಪಿಎಲ್ ನಲ್ಲಿ ಲಕ್ನೋದಿಂದ ಡೆಲ್ಲಿ ತಂಡ ಸೇರಿಕೊಂಡಿದ್ದ ಕೆಎಲ್ ರಾಹುಲ್ ಒಂದೇ ವರ್ಷಕ್ಕೆ ಈ ತಂಡವನ್ನು ಸೇರಿಕೊಳ್ಳಲಿದ್ದಾರೆ ಮಾತು ಕೇಳಿಬರುತ್ತಿದೆ.

ಮುಂದಿನ ಐಪಿಎಲ್ ಮಿನಿ ಹರಾಜಿಗೆ ಮುನ್ನ ತೆರೆಮರೆಯಲ್ಲೇ ಕೆಎಲ್ ರಾಹುಲ್ ರನ್ನು ತಮ್ಮ ತಂಡಕ್ಕೆ ಟ್ರೇಡ್ ಮಾಡಿಕೊಳ್ಳಲು ಕೋಲ್ಕತ್ತಾ ನೈಟ್ ರೈಡರ್ಸ್ ಪ್ರಯತ್ನ ನಡೆಸಿದೆ. ಕೆಲವು ದಿನಗಳಿಂದ ಕೆಎಲ್ ರಾಹುಲ್ ಮುಂದಿನ ಸೀಸನ್ ಗೆ ಬೇರೆ ತಂಡಕ್ಕೆ ಸೇರಿಕೊಳ್ಳಲಿದ್ದಾರೆ ಎಂದು ಸುದ್ದಿಯಾಗುತ್ತಲೇ ಇದೆ.

ಕಳೆದ ಸೀಸನ್ ನಲ್ಲಿ ಕೆಎಲ್ ರಾಹುಲ್ ರನ್ನು ಡೆಲ್ಲಿ ತಂಡ 14 ಕೋಟಿ ರೂ. ಕೊಟ್ಟು ಖರೀದಿ ಮಾಡಿತ್ತು. ರಾಹುಲ್ ಕೂಡಾ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದರು. ಆದರೆ ಡೆಲ್ಲಿ ಆರಂಭದಲ್ಲಿ ಸತತ ಗೆಲುವು ಕಂಡರೂ ಕೊನೆಯಲ್ಲಿ ಫೈನಲ್ ಗೇರಲು ವಿಫಲವಾಯಿತು.

ಈ ಬಾರಿ ಕೆಕೆಆರ್ ಹೊಸ ನಾಯಕನ ಹುಡುಕಾಟದಲ್ಲಿದೆ. ಕಳೆದ ಸೀಸನ್ ನಲ್ಲಿ ಹಿರಿಯ ಆಟಗಾರ ಅಜಿಂಕ್ಯಾ ರೆಹಾನೆ ತಂಡದ ನಾಯಕರಾಗಿದ್ದರು. ಆದರೆ ತಂಡ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಹೀಗಾಗಿ ಕೆಎಲ್ ರಾಹುಲ್ ರನ್ನು ತಂಡಕ್ಕೆ ಕರೆಸಿ ನಾಯಕರಾಗಿಸುವ ಯೋಜನೆಯಿದೆ ಎನ್ನಲಾಗುತ್ತಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮೊಹಮ್ಮದ್ ಶಮಿಯನ್ನು ಟೀಂ ಇಂಡಿಯಾಕ್ಕೆ ಯಾಕೆ ಆಯ್ಕೆ ಮಾಡ್ತಿಲ್ಲ: ಶಾಕಿಂಗ್ ಹೇಳಿಕೆ ನೀಡಿದ ವೇಗಿ