ಮ್ಯಾಂಚೆಸ್ಟರ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ದ್ವಿತೀಯ ಇನಿಂಗ್ಸ್ ನಲ್ಲಿ ಇಂಗ್ಲೆಂಡ್ ಗೆಲುವಿಗೆ ಅಡ್ಡವಾಗಿ ನಿಂತಿದ್ದ ಕೆಎಲ್ ರಾಹುಲ್ ಗೆ ನಿಮಗೆ ಸ್ವಿಂಗ್ ಆಡುವ ಯೋಗ್ಯತೆಯಿಲ್ಲ ಎಂದು ಹ್ಯಾರಿ ಬ್ರೂಕ್ ಕಿಚಾಯಿಸಿದ್ದಾರೆ. ಇದಕ್ಕೆ ಕೆಎಲ್ ರಾಹುಲ್ ಉತ್ತರ ಏನಿತ್ತು ನೋಡಿ.
ದ್ವಿತೀಯ ಇನಿಂಗ್ಸ್ ನಲ್ಲಿ ಭಾರತ ಶೂನ್ಯಕ್ಕೇ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ನಾಯಕ ಶುಭಮನ್ ಗಿಲ್-ಕೆಎಲ್ ರಾಹುಲ್ ಜೋಡಿ ತಂಡಕ್ಕೆ ಆಧಾರವಾದರು. ನಿಧಾನಗತಿಯ ಆಟದ ಮೂಲಕ ತಂಡವನ್ನು ಸುರಕ್ಷಿತ ಸ್ಥಾನಕ್ಕೆ ಕೊಂಡೊಯ್ದರು.
ಈ ಸರಣಿಯುದ್ದಕ್ಕೂ ಇಂಗ್ಲೆಂಡ್ ಗೆ ದೊಡ್ಡ ತಲೆನೋವು ಕೆಎಲ್ ರಾಹುಲ್. ಪ್ರತೀ ಇನಿಂಗ್ಸ್ ನಲ್ಲೂ ಅವರು ದೊಡ್ಡ ಮೊತ್ತವನ್ನು ಪೇರಿಸುತ್ತಾರೆ. ಈ ಕಾರಣಕ್ಕೆ ಇಂಗ್ಲೆಂಡ್ ಆಟಗಾರರು ಅವರನ್ನೇ ಮಾತಿನ ಮೂಲಕ ಕೆಣಕುವ ಪ್ರಯತ್ನ ಮಾಡಿದ್ದಾರೆ.
ಇಂಗ್ಲೆಂಡ್ ಫೀಲ್ಡರ್ ಹ್ಯಾರಿ ಬ್ರೂಕ್ ಅಂತೂ ಕೆಎಲ್ ರಾಹುಲ್ ಗೆ ನಿಮಗೆ ಸ್ವಿಂಗ್ ಆಡುವ ಯೋಗ್ಯತೆಯಿಲ್ಲ. ಬೇಗ ಬೇಗ ಔಟಾಗಿ ಹೋಗಿ, ಪಂದ್ಯ ಮುಗಿಯಲಿ ಎಂದು ಕಿಚಾಯಿಸಿದ್ದಾರೆ. ಇದಕ್ಕೆ ರಾಹುಲ್ ಕೂಡಾ ತಕ್ಕ ಉತ್ತರ ಕೊಟ್ಟಿದ್ದಾರೆ. ನಿಮ್ಮ ತಂದೆಗೆ ಹೋಗಿ ಹೀಗೆ ಹೇಳಬೇಡಿ. ನೀವು ಸ್ಪಿನ್ ಪಿಚ್ ನಲ್ಲಿ ಡ್ಯಾನ್ಸ್ ಮಾಡುವುದನ್ನು ನಾವು ನೋಡಿದ್ದೇವೆ ಎಂದು ತಿರುಗೇಟು ನೀಡಿದ್ದಾರೆ.