Select Your Language

Notifications

webdunia
webdunia
webdunia
webdunia

Video: ಡ್ರಾ ಮಾಡಿಕೊಳ್ಳೋಣ್ವಾ ಎಂದರೆ ತಡಿ ಸೆಂಚುರಿ ಮಾಡ್ತೀನಿ ಎಂದ ರವೀಂದ್ರ ಜಡೇಜಾ

Jadeja Ben stokes

Krishnaveni K

ಮ್ಯಾಂಚೆಸ್ಟರ್ , ಸೋಮವಾರ, 28 ಜುಲೈ 2025 (09:28 IST)
Photo Credit: X
 ಮ್ಯಾಂಚೆಸ್ಟರ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್ ಜೋಡಿ ಶತಕ ಸಿಡಿಸಿ ಭಾರತಕ್ಕೆ ಎದುರಾಗಬಹುದಾಗಿದ್ದ ಸೋಲನ್ನು ತಪ್ಪಿಸಿದರು. ಆದರೆ ಡ್ರಾ ಮಾಡಿಕೊಳ್ಳಲು ಜಡೇಜಾ ಇಂಗ್ಲೆಂಡ್ ನಾಯಕನನ್ನು ಸತಾಯಿಸಿದರು.

 

ದ್ವಿತೀಯ ಇನಿಂಗ್ಸ್ ನಲ್ಲಿ ಭಾರತ ಖಾತೆ ತೆರೆಯುವ ಮೊದಲೇ 2 ವಿಕೆಟ್ ಕಳೆದುಕೊಂಡಿತ್ತು. ಬಳಿಕ ಕೆಎಲ್ ರಾಹುಲ್-ಗಿಲ್ ಜೋಡಿ 188 ರನ್ ಗಳ ಜೊತೆಯಾಟವಾಗಿ ಅಡಿಪಾಯ ಹಾಕಿಕೊಟ್ಟರು. ಗಿಲ್ 103 ರನ್ ಗಳಿಸಿ ಔಟಾದರೆ ಕೆಎಲ್ ರಾಹುಲ್ 90 ಕ್ಕೆ ಔಟಾಗುವ ಮೂಲಕ ಶತಕ ಪೂರೈಸಲಾಗದೇ ನಿರಾಸೆ ಅನುಭವಿಸಿದರು. ವಿಶೇಷವೆಂದರೆ ಗಿಲ್ 238 ಎಸೆತಗಳನ್ನು ಎದುರಿಸಿದ್ದರೆ ರಾಹುಲ್ 230 ಎಸೆತಗಳನ್ನು ಎದುರಿಸಿದ್ದರು. ಇದರಿಂದಾಗಿಯೇ ಭಾರತೀಯರಲ್ಲಿ ಆತ್ಮವಿಶ್ವಾಸ ಸಿಕ್ಕಿತು.

ಬಳಿಕ ವಾಷಿಂಗ್ಟನ್ ಸುಂದರ್-ಜಡೇಜಾ ಜೋಡಿಯ ಆಟ. 222 ರನ್ ಗಳಾಗಿದ್ದ ಭಾರತ 4 ನೇ ವಿಕೆಟ್ ಕಳೆದುಕೊಂಡಿತು. ಬಳಿಕ 425 ರನ್ ತನಕ ಈ ಜೋಡಿ ಔಟಾಗದೇ ಬ್ಯಾಟಿಂಗ್ ನಡೆಸಿದರು. ಜಡೇಜಾ ಮೊದಲನೆಯದವರಾಗಿ ಶತಕ (107) ಗಳಿಸಿದರೆ ಸುಂದರ್ ಎರಡನೆಯವರಾಗಿ ಶತಕ (101) ಪೂರೈಸಿದರು.

 ಜಡೇಜಾ 90 ರ ಆಸುಪಾಸಿನಲ್ಲಿದ್ದಾಗ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಡ್ರಾ ಮಾಡಿಕೊಳ್ಳೋಣ್ವಾ ಎಂದು ಜಡೇಜಾ ಕೈಕುಲುಕಲು ಬಂದರು. ಆದರೆ ಜಡೇಜಾ ಮತ್ತು ಸುಂದರ್ ಇಷ್ಟು ಹೊತ್ತು ಆಡಿದ ಮೇಲೆ ಶತಕ ಪೂರೈಸದೇ ಪಂದ್ಯ ಮುಗಿಸಲು ಮನಸ್ಸು ಮಾಡಲಿಲ್ಲ. ಹೀಗಾಗಿ ಸ್ಟೋಕ್ಸ್ ಗೆ ಕೈಕುಲುಕದೇ ಆಟ ಮುಂದುವರಿಸಿದರು.

ಜಡೇಜಾ ಶತಕ ಪೂರೈಸಿದ ಬಳಿಕ ಬೌಲರ್ ಬ್ರೂಕ್ ಅಭಿನಂದಿಸಲು ಬಂದರೂ ವಾಷಿಂಗ್ಟನ್ ಸುಂದರ್ ಕ್ಯಾರೇ ಎನ್ನದೇ ಜಡೇಜಾ ಬಳಿ ಸಾಗಿದರು. ಭಾರತ ತಂಡದ ನಾಯಕ ಶುಭಮನ್ ಗಿಲ್ ಕೂಡಾ ಇಬ್ಬರೂ ಶತಕ ಪೂರೈಸಿದ ಬಳಿಕವಷ್ಟೇ ಡ್ರಾ ಮಾಡಿಕೊಳ್ಳಲು ಒಪ್ಪಿದರು.



Share this Story:

Follow Webdunia kannada

ಮುಂದಿನ ಸುದ್ದಿ

ಕಾಲಿನ ಬೆರಳು ಮುರಿದರೂ ಮತ್ತೆ ಕಣಕ್ಕೆ ಇಳಿಯಲು ಸಜ್ಜಾದ ರಿಷಭ್‌ ಪಂತ್‌: ಕುತೂಹಲ ಘಟ್ಟದತ್ತ ನಾಲ್ಕನೇ ಟೆಸ್ಟ್‌