Publish Date: Thu, 18 Jan 2024 (09:00 IST)
Updated Date: Thu, 18 Jan 2024 (09:01 IST)
ಮಂಗಳೂರು: ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಇಂದು ತಮ್ಮ ತವರು ದಕ್ಷಿಣ ಕನ್ನಡದ ಪ್ರಮುಖ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ.
ಕೊಲ್ಲೂರು ಮೂಕಾಂಬಿಕಾ ದೇವಾಲಯ, ಧರ್ಮಸ್ಥಳ ಮಂಜುನಾಥ ದೇವಾಲಯ, ಸೌತಡ್ಕ ಮಹಾಗಣಪತಿ ದೇವಾಲಯ ಮತ್ತು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಕೆಎಲ್ ರಾಹುಲ್ ಸದ್ಯಕ್ಕೆ ಟೀಂ ಇಂಡಿಯಾದಿಂದ ಬ್ರೇಕ್ ಪಡೆದಿದ್ದಾರೆ. ಹೀಗಾಗಿ ತಮ್ಮ ತವರು ಮಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ರಾಹುಲ್ ಮೂಲತಃ ಮಂಗಳೂರಿನವರು. ಹೀಗಾಗಿ ಆಗಾಗ ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ.
ಕೇವಲ ದೇವಾಲಯ ಮಾತ್ರವಲ್ಲ, ಮಂಗಳೂರಿನ ಪಬ್ಬಾಸ್ ನಲ್ಲಿ ಐಸ್ ಕ್ರೀಂ ಸವಿಯುವುದೂ ಅವರಿಗೆ ಇಷ್ಟ. ಈ ಬಾರಿಯೂ ಅಲ್ಲಿಗೆ ಭೇಟಿ ನೀಡಿ ಗಡ್ ಬಡ್ ಸವಿದಿದ್ದಾರೆ. ತಮ್ಮ ತವರಿಗೆ ಭೇಟಿ ನೀಡಿದ ಕ್ಷಣಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಅವರು ನಮ್ಮ ಕುಡ್ಲ (ಮಂಗಳೂರು)ಗೆ ಎಂದೆಂದಿಗೂ ಚಿರ ಋಣಿ ಎಂದು ಬರೆದುಕೊಂಡಿದ್ದಾರೆ.