Select Your Language

Notifications

webdunia
webdunia
webdunia
webdunia

INDvsAFG T20I: ರೋಹಿತ್-ರಿಂಕು ಅಬ್ಬರಕ್ಕೆ 5 ಓವರ್ ನಲ್ಲಿ 103 ರನ್!

Rohit Sharma, Rinku Singh, Rohit Sharma Century, India vs Afghanistan

Krishnaveni K

ಬೆಂಗಳೂರು , ಗುರುವಾರ, 18 ಜನವರಿ 2024 (08:40 IST)
ಬೆಂಗಳೂರು: ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಎರಡೆರಡು ಸೂಪರ್ ಓವರ್ ಬಳಿಕ ರೋಚಕವಾಗಿ ಪಂದ್ಯ ಗೆದ್ದುಕೊಂಡಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ರೋಹಿತ್ ಶರ್ಮಾ-ರಿಂಕು ಸಿಂಗ್ ಜೋಡಿಯ ಅಬ್ಬರದ ಆಟದಿಂದ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿತು. ಕಳೆದ ಎರಡೂ ಪಂದ್ಯಗಳಲ್ಲಿ ಶೂನ್ಯ ಸುತ್ತಿದ್ದ ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಇಡೀ ತಂಡದ ಹೊಣೆಯನ್ನು ತಾವೇ ಹೆಗಲಿಗೇರಿಸಿಕೊಂಡು ಮುನ್ನಡೆದರು. 69 ಎಸೆತ ಎದುರಿಸಿದ ರೋಹಿತ್ 11 ಬೌಂಡರಿ, 8 ಸಿಕ್ಸರ್ ಸಹಿತ ಅಜೇಯರಾಗಿ 121 ರನ್ ಚಚ್ಚಿದರು. ರಿಂಕು ಸಿಂಗ್ 39 ಎಸೆತಗಳಿಂದ 6 ಸಿಕ್ಸರ್ ಸಹಿತ ಅಜೇಯ 69 ರನ್ ಗಳಿಸಿದರು.

22 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತ ಬಳಿಕ ಈ ಇಬ್ಬರು ಜೋಡಿಯ ಆಟದಿಂದಾಗಿ  ಬೃಹತ್ ಮೊತ್ತ ಪೇರಿಸಿತು. ಅದರಲ್ಲೂ ಕೊನೆಯ 5 ಓವರ್ ಗಳಲ್ಲಿ 103 ರನ್ ಗಳಿಸಿತ್ತು. ಇಷ್ಟು ಗಳಿಸಿದ ಮೇಲೆಯೂ ಭಾರತಕ್ಕೆ ತಕ್ಕ ಪ್ರತಿಕ್ರಿಯೆ ನೀಡಿದ ಅಫ್ಘಾನಿಸ್ತಾ 20 ಓವರ್ ಗಳಲ್ಲಿ 212 ರನ್ ಗಳಿಸಿ ಪಂದ್ಯ ಟೈ ಮಾಡಿಕೊಂಡಿತು.

ಬಳಿಕ ಮೊದಲ ಸೂಪರ್ ಓವರ್ ನಲ್ಲಿ ಎರಡೂ ತಂಡಗಳೂ 1 ವಿಕೆಟ್ ಕಳೆದುಕೊಂಡು 16 ರನ್ ಗಳಿಸಿತು. ಬಳಿಕ ಎರಡನೇ ಸೂಪರ್ ಓವರ್ ನಲ್ಲಿ ಭಾರತ 1 ಓವರ್ ಗೆ 2 ವಿಕೆಟ್ ನಷ್ಟಕ್ಕೆ 11 ರನ್ ಗಳಿಸಿತು. ಗೆಲ್ಲಲು 12 ರನ್ ಬೆನ್ನತ್ತಿದ ಅಫ್ಘಾನಿಸ್ತಾನ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿತು. 3 ಎಸೆತಗಳಲ್ಲಿ 2 ವಿಕೆಟ್ ಕಳೆದುಕೊಂಡ ಅಫ್ಘಾನ್ ಆಲೌಟ್ ಎಂದು ತೀರ್ಮಾನಿಸಿ ಪಂದ್ಯದಲ್ಲಿ ಟೀಂ ಇಂಡಿಯಾ ವಿಜಯಿ ಎಂದು ಘೋಷಿಸಲಾಯಿತು.

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಯೂ ಕಷ್ಟ, ವಿಚ್ಛೇದನವೂ ಕಷ್ಟ ಎಂದ ಸಾನಿಯಾ ಮಿರ್ಜಾ