Select Your Language

Notifications

webdunia
webdunia
webdunia
webdunia

INDvAFG T20I: ಬೆಂಗಳೂರಿನಲ್ಲಿ ಇಂದು ಔಪಚಾರಿಕ ಪಂದ್ಯ

INDvAFG

Krishnaveni K

ಬೆಂಗಳೂರು , ಬುಧವಾರ, 17 ಜನವರಿ 2024 (08:20 IST)
ಬೆಂಗಳೂರು: ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ಇಂದು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಮೂರು ಪಂದ್ಯಗಳ ಟಿ20 ಸರಣಿಯ ಕೊನೆಯ ಪಂದ್ಯ ನಡೆಯಲಿದೆ.

ಈಗಾಗಲೇ ಟೀಂ ಇಂಡಿಯಾ ಸರಣಿ ಕೈವಶ ಮಾಡಿಕೊಂಡಿರುವುದರಿಂದ ಈ ಪಂದ್ಯ ಕೇವಲ ಔಪಚಾರಿಕವಾಗಿದೆ. ಅದರಲ್ಲೂ ರಶೀದ್ ಖಾನ್ ಅನುಪಸ್ಥಿತಿಯಲ್ಲಿ ಪೇಲವವಾಗಿರುವ ಅಫ್ಘಾನಿಸ್ತಾನ ತಂಡವನ್ನು ವೈಟ್ ವಾಶ್ ಮಾಡಿ ಟ್ರೋಫಿ ಎತ್ತಿ ಹಿಡಿಯುವ ಭರವಸೆಯಲ್ಲಿ ಟೀಂ ಇಂಡಿಯಾವಿದೆ.

ಆದರೆ ಟೀಂ ಇಂಡಿಯಾಗೆ ಕಳೆದ ಎರಡೂ ಪಂದ್ಯಗಳಲ್ಲಿ ಕೈ ಹಿಡಿದಿದ್ದು ಯುವ ಕ್ರಿಕೆಟಿಗರು.  ನಾಯಕ ರೋಹಿತ್ ಶರ್ಮಾ ಕಳೆದ ಎರಡೂ ಪಂದ್ಯಗಳಲ್ಲಿ ಶೂನ್ಯಕ್ಕೆ ನಿರ್ಗಮಿಸಿ ನಿರಾಸೆ ಮೂಡಿಸಿದ್ದರು. ಕೊಹ್ಲಿ ಕಳೆದ ಪಂದ್ಯವನ್ನು ಆಡಿದ್ದರೂ 29 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಹೀಗಾಗಿ ಈ ಸರಣಿಯಲ್ಲಿ ಯುವ ಕ್ರಿಕೆಟಿಗರದ್ದೇ ಮೇಲುಗೈಯಾಗಿತ್ತು.

ಅತ್ತ ಅಫ್ಘಾನಿಸ್ತಾನಕ್ಕೆ ರಶೀದ್ ಖಾನ್ ಅನುಪಸ್ಥಿತಿಯಲ್ಲಿ ಈ ಸರಣಿ ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಜೊತೆಗೆ ಬೆಂಗಳೂರು ಮೈದಾನದಲ್ಲಿ ಟೀಂ ಇಂಡಿಯಾ ದಾಖಲೆಯೂ ಉತ್ತಮವಾಗಿದೆ. ಹೀಗಾಗಿ ಇಂದಿನ ಪಂದ್ಯದಲ್ಲೂ ಮತ್ತೆ ಟೀಂ ಇಂಡಿಯಾ ಮೇಲುಗೈ ಸಾಧಿಸುವ ವಿಶ್ವಾಸವಿದೆ. ಈ ಪಂದ್ಯ ಸಂಜೆ 7 ಗಂಟೆಗೆ ನಡೆಯುವುದು.

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀರಾಮನ ಸುಂದರ ಚಿತ್ರ ಬರೆದ ಕ್ರಿಕೆಟಿಗ ಕುಲದೀಪ್ ಯಾದವ್