Publish Date: Sun, 14 Jan 2024 (11:04 IST)
Updated Date: Sun, 14 Jan 2024 (11:06 IST)
ಮುಂಬೈ: ರೋಹಿತ್ ಶರ್ಮಾರಿಂದ ಐಪಿಎಲ್ ನಾಯಕತ್ವ ಕಿತ್ತುಕೊಂಡ ಮೇಲೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಮೇಲೆ ಅಭಿಮಾನಿಗಳು ಸಿಕ್ಕಾಪಟ್ಟೆ ಸಿಟ್ಟಾಗಿದ್ದರು. ಇದೀಗ ಮತ್ತೆ ಫ್ರಾಂಚೈಸಿ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಗಿದೆ.
ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್ ಸರಣಿಗೆ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಘೋಷಣೆಯಾಗಿತ್ತು. ಈ ತಂಡದ ವಿವರವನ್ನು ಮುಂಬೈ ಇಂಡಿಯನ್ಸ್ ತನ್ನ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿತ್ತು.
ಆದರೆ ತಂಡದ ಜೊತೆ ಫೋಟೋ ಪ್ರಕಟಿಸುವಾಗ ತನ್ನದೇ ಫ್ರಾಂಚೈಸಿಯ ಯಶಸ್ವೀ ನಾಯಕ ರೋಹಿತ್ ಶರ್ಮಾ ಫೋಟೋ ಬದಲು ಕೆಎಲ್ ರಾಹುಲ್, ಬುಮ್ರಾ ಮತ್ತು ಶ್ರೇಯಸ್ ಅಯ್ಯರ್ ಫೋಟೋ ಬಳಕೆ ಮಾಡಿದೆ. ಇದು ರೋಹಿತ್ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಗಿದೆ.
ರೋಹಿತ್ ಶರ್ಮಾ ಮೇಲೆ ನಿಮಗೆ ಇಷ್ಟೊಂದು ಧ್ವೇಷ ಯಾಕೆ? ರೋಹಿತ್ ತಂಡದಲ್ಲಿ ಇದ್ದಾರೆ ಎನ್ನುವುದಾದರೂ ನಿಮಗೆ ಗೊತ್ತಾ ಎಂದು ಫ್ಯಾನ್ಸ್ ಕಿಡಿಕಾರಿದ್ದಾರೆ.