Select Your Language

Notifications

webdunia
webdunia
webdunia
webdunia

INDvAFG T20I: ವಿರಾಟ್ ಕೊಹ್ಲಿ ಮುಂದಿದೆ 3 ದಾಖಲೆಗಳು

Virat Kohli

Krishnaveni K

ಇಂಧೋರ್ , ಭಾನುವಾರ, 14 ಜನವರಿ 2024 (09:10 IST)
ಇಂಧೋರ್: ಅಫ್ಘಾನಿಸ್ತಾನ ವಿರುದ್ಧ  ಇಂದು ದ್ವಿತೀಯ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಪರ ವಿರಾಟ್ ಕೊಹ್ಲಿ ಕಣಕ್ಕಿಳಿಯಲಿದ್ದಾರೆ.

ಬಹಳ ದಿನಗಳ ನಂತರ ಕೊಹ್ಲಿ ಟಿ20 ಅಂತಾರಾಷ್ಟ್ರೀಯ ಪಂದ್ಯಕ್ಕೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಹೀಗಾಗಿ ಸಹಜವಾಗಿಯೇ ಅವರ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದೆ.

ಇನ್ನು, ಈ ಪಂದ್ಯದಲ್ಲಿ ಕೊಹ್ಲಿ ಮೂರು ದಾಖಲೆಗಳನ್ನು ಮುರಿಯುವ ಅವಕಾಶ ಹೊಂದಿದ್ದಾರೆ. ಅವುಗಳ ಪೈಕಿ ಮೊದಲನೆಯದ್ದು ಟಿ20 ಕ್ರಿಕೆಟ್ ನಲ್ಲಿ 12 ಸಾವಿರ ರನ್ ಪೂರೈಸುವ ಅವಕಾಶ. ಸದ್ಯಕ್ಕೆ ಕೊಹ್ಲಿ 11965 ರನ್ ಗಳಿಸಿದ್ದಾರೆ. ಇನ್ನು 35 ರನ್ ಗಳಿಸಿದರೆ ಟಿ20 ಕ್ರಿಕೆಟ್ ನಲ್ಲಿ 12 ಸಾವಿರ ರನ್ ಪೂರೈಸಿದ ದಾಖಲೆ ಮಾಡಲಿದ್ದಾರೆ.

ಈ ಪಂದ್ಯದಲ್ಲಿ ಕೊಹ್ಲಿ ಅರ್ಧಶತಕ ಗಳಿಸಿದರೆ ಟಿ20 ಕ್ರಿಕೆಟ್‍ ನಲ್ಲಿ 100 ನೇ ಅರ್ಧಶತಕ ಗಳಿಸಿದಂತಾಗುತ್ತದೆ. ಮೂರನೆಯದ್ದಾಗಿ ಕೊಹ್ಲಿ ಟಿ20 ಕ್ರಿಕೆಟ್ ನಲ್ಲಿ 9 ಸಾವಿರ ಎಸೆತ ಎದುರಿಸಿದ ದಾಖಲೆ ಮಾಡಲಿದ್ದಾರೆ. ಇದಕ್ಕಾಗಿ ಅವರು ಇಂದಿನ ಪಂದ್ಯದಲ್ಲಿ 28 ಎದುರಿಸಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

INDvAFG T20I: ಎರಡನೇ ಟಿ20 ಇಂದು, ಕೊಹ್ಲಿ ಕಮ್ ಬ್ಯಾಕ್