ಮುಂಬೈ: ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಟೀಂ ಇಂಡಿಯಾ ಆಯ್ಕೆ ಮಾಡಲಾಗಿದ್ದು ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ.
ನಿರೀಕ್ಷೆಯಂತೇ ಇಶಾನ್ ಕಿಶನ್ ಗೆ ಕೊಕ್ ನೀಡಲಾಗಿದೆ. ಗಾಯಗೊಂಡಿರುವ ಮೊಹಮ್ಮದ್ ಶಮಿ ಕೂಡಾ ತಂಡದಿಂದ ಹೊರಗುಳಿದಿದ್ದಾರೆ. ವಿಕೆಟ್ ಕೀಪರ್ ಆಗಿ ಕೆಎಲ್ ರಾಹುಲ್, ಕೆ.ಎಸ್. ಭರತ್ ಜೊತೆಗೆ ಹೊಸ ಪ್ರತಿಭೆ ಧ್ರುವ ಜ್ಯುರೆಲ್ ಗೆ ಅವಕಾಶ ನೀಡಲಾಗಿದೆ.
ಕೆ.ಎಸ್. ಭರತ್ ಗೆ ಕಳೆದ ಆಫ್ರಿಕಾ ಸರಣಿಯಲ್ಲೂ ಕೊನೆಯ ಕ್ಷಣದಲ್ಲಿ ಅವಕಾಶ ನೀಡಲಾಗಿತ್ತಾದರೂ ಕೆಎಲ್ ರಾಹುಲ್ ಅವರೇ ವಿಕೆಟ್ ಕೀಪರ್ ಜವಾಬ್ಧಾರಿ ನಿಭಾಯಿಸಿದ್ದರು. ಇನ್ನು, ಇಶಾನ್ ಕಿಶನ್ ರಣಜಿ ಟ್ರೋಫಿ ಆಡಲು ಸೂಚಿಸಿದರೂ ಆಡಲೊಪ್ಪದ ಕಾರಣ ಅವರನ್ನೂ ಕೈ ಬಿಡಲಾಗಿದೆ. ಉಳಿದಂತೆ ತಂಡ ಇಂತಿದೆ.
ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಕೆ.ಎಸ್. ಭರತ್ (ವಿಕೆಟ್ ಕೀಪರ್), ಧ್ರುವ ಜ್ಯುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ(ಉಪನಾಯಕ), ಆವೇಶ್ ಖಾನ್.