Select Your Language

Notifications

webdunia
webdunia
webdunia
webdunia

ದ್ರಾವಿಡ್ ಮಾತಿಗೂ ಡೋಂಟ್ ಕೇರ್: ರಣಜಿಗೆ ಗೈರಾದ ಇಶಾನ್ ಕಿಶನ್

Ishan Kishan

Krishnaveni K

ರಾಂಚಿ , ಶನಿವಾರ, 13 ಜನವರಿ 2024 (08:21 IST)
ರಾಂಚಿ: ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟಿಗ ಇಶಾನ್ ಕಿಶನ್ ನಿನ್ನೆಯಿಂದ ಆರಂಭವಾದ ಮಹಾರಾಷ್ಟ್ರ ವಿರುದ್ಧದ ರಣಜಿ ಪಂದ್ಯದಲ್ಲಿ ಜಾರ್ಖಂಡ್ ಪರ ಆಡಬೇಕಿತ್ತು. ಆದರೆ ಅವರು ಗೈರಾಗಿದ್ದಾರೆ.

ಮಾನಸಿಕವಾಗಿ ಸುಸ್ತಾಗಿರುವುದಾಗಿ ಹೇಳಿ ಇಶಾನ್ ದ.ಆಫ್ರಿಕಾ ಸರಣಿಯಿಂದ ಹೊರಗುಳಿದಿದ್ದರು. ಆದರೆ ಬಳಿಕ ಅವರು ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದು, ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿತ್ತು ಎಂದು ವರದಿಯಾಗಿತ್ತು. ಹೀಗಾಗಿಯೇ ಅವರನ್ನು ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೆ ಆಯ್ಕೆ ಮಾಡಲಿಲ್ಲ ಎಂಬ ಸುದ್ದಿಗಳಿತ್ತು. ಆದರೆ ಕೋಚ್ ದ್ರಾವಿಡ್ ಇದನ್ನು ನಿರಾಕರಿಸಿದ್ದರು.

ಹಾಗಿದ್ದರೂ ದ್ರಾವಿಡ್ ಸೂಚನೆಯಂತೆ ಅವರು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತಂಡಕ್ಕೆ ಆಯ್ಕೆಯಾಗಲು ರಣಜಿ ಪಂದ್ಯದಲ್ಲಿ ಆಡಬೇಕಿತ್ತು.

ಆದರೆ ದ್ರಾವಿಡ್ ಸೂಚನೆಗೂ ಡೋಂಟ್ ಕೇರ್ ಮಾಡಿರುವ ಇಶಾನ್ ರಣಜಿಯಿಂದ ಹೊರಗುಳಿದಿದ್ದಾರೆ. ಜಾರ್ಖಂಡ್ ಕ್ರಿಕೆಟ್ ಅಸೋಸಿಯೇಷನ್ ಕೂಡಾ ನಮ್ಮ ಜೊತೆ ಇಶಾನ್ ರಣಜಿ ಆಡುವ ಬಗ್ಗೆ ಮಾತನಾಡಿಲ್ಲ. ಒಂದು ವೇಳೆ ಅವರು ಲಭ‍್ಯರಿದ್ದಾರೆ ಎಂದಿದ್ದರೆ ಸೀದಾ ಆಡುವ ಬಳಗದಲ್ಲಿ ಸ್ಥಾನ ಪಡೆಯುತ್ತಿದ್ದರು ಎಂದಿದ್ದಾರೆ. ಹೀಗಾಗಿ ಇಂಗ್ಲೆಂಡ್ ಸರಣಿಗೆ ಇಶಾನ್ ಆಯ್ಕೆಯಾಗುತ್ತಾರೋ ಎಂಬ ಅನುಮಾನ ಮೂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೊಹಮ್ಮದ್ ಶಮಿ ಅಡ್ಡ ಹೆಸರೇನು ಎಂದು ರಿವೀಲ್ ಮಾಡಿದ ವಿರಾಟ್ ಕೊಹ್ಲಿ