Select Your Language

Notifications

webdunia
webdunia
webdunia
webdunia

ದುಡ್ಡಿಗಿಂತ ಆತ್ಮಗೌರವವೇ ದೊಡ್ಡದು ಎಂದು ನಿರ್ಧರಿಸಿದ ಕೆಎಲ್ ರಾಹುಲ್

KL Rahul

Krishnaveni K

ಬೆಂಗಳೂರು , ಶುಕ್ರವಾರ, 1 ನವೆಂಬರ್ 2024 (08:56 IST)
ಬೆಂಗಳೂರು: ಐಪಿಎಲ್ 2025 ರಲ್ಲಿ ಕೆಎಲ್ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿಯೇ ಉಳಿದುಕೊಳ್ಳುತ್ತಾರೆಯೇ ಎಂಬ ಪ್ರಶ್ನೆಗಳಿಗೆ ಈಗ ಉತ್ತರ ಸಿಕ್ಕಿದೆ. ಹಣಕ್ಕಿಂತ ಆತ್ಮಗೌರವವೇ ದೊಡ್ಡದು ಎಂದು ರಾಹುಲ್ ನಿರ್ಧರಿಸಿದಂತಿದೆ.

ಐಪಿಎಲ್ 2025 ರಲ್ಲಿ ಲಕ್ನೋ ತಂಡದಿಂದ ಕೆಎಲ್ ರಾಹುಲ್ ರಿಲೀಸ್ ಆಗುವುದು ಬಹುತೇಕ ಕನ್ ಫರ್ಮ್ ಆಗಿದೆ. ರಾಹುಲ್ ಗೆ 18 ಕೋಟಿ ರೂ. ವೇತನ ನೀಡಲಾಗುತ್ತಿತ್ತು. ಆದರೆ ಕಳೆದ ಬಾರಿ ಮೈದಾನದಲ್ಲಿಯೇ ರಾಹುಲ್ ರನ್ನು ತಂಡದ ಮಾಲಿಕ ಸಂಜಯ್ ಗೊಯೆಂಕಾ ಬೈದು ಅವಮಾನಿಸಿದ್ದರು.

ಆ ಘಟನೆ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಸ್ವಾಭಿಮಾನ ಬಿಟ್ಟು ನೀವು ಆ ತಂಡದಲ್ಲಿ ಇರಬೇಡಿ, ಮುಂದಿನ ಸಲ ಆರ್ ಸಿಬಿಗೆ ಬನ್ನಿ ಎಂದು ಅಭಿಮಾನಿಗಳು ಸಲಹೆ ನೀಡಿದ್ದರು. ಅದರಂತೆ ರಾಹುಲ್ ಈ ಬಾರಿ ಮತ್ತೆ ತಮ್ಮ ತವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರುವುದು ಬಹುತೇಕ ಖಚಿತವಾಗಿದೆ.

ಇತ್ತೀಚೆಗೆ ಲಕ್ನೋ ಮಾಲಿಕ ಸಂಜಯ್ ಗೊಯೆಂಕಾರನ್ನು ಅವರ ಕಚೇರಿಯಲ್ಲಿ ರಾಹುಲ್ ಭೇಟಿಯಾಗಿದ್ದರು. ಬಳಿಕ ಸಂಜಯ್ ಗೊಯೆಂಕಾ ರಾಹುಲ್ ನಮ್ಮ ತಂಡದ ಅವಿಭಾಜ್ಯ ಅಂಗ ಎಂದಿದ್ದರು. ಆಗ ಅಭಿಮಾನಿಗಳು ನಿಮಗೆ ಆತ್ಮಗೌರವಕ್ಕಿಂತ ದುಡ್ಡೇ ಹೆಚ್ಚಾಯಿತೇ ಎಂದು ರಾಹುಲ್ ರನ್ನು ಪ್ರಶ್ನಿಸಿದ್ದರು. ಆದರೆ ಈಗ ಲಕ್ನೋ ಆಫರ್ ತಿರಸ್ಕರಿಸಿ ಬೇರೆ ತಂಡ ಸೇರಲು ರಾಹುಲ್ ನಿರ್ಧರಿಸಿರುವುದು ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

RCB: ಆರ್ ಸಿಬಿಗೆ ಮತ್ತೆ ಕ್ಯಾಪ್ಟನ್ ಆಗಿ ವಿರಾಟ್ ಕೊಹ್ಲಿ