ಪುಣೆ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲೂ ಟೀಂ ಇಂಡಿಯಾ ಬ್ಯಾಟಿಂಗ್ ವೈಫಲ್ಯ ಮುಂದುವರಿದಿದೆ. ಇದರ ಬೆನ್ನಲ್ಲೇ ಕೆಎಲ್ ರಾಹುಲ್ ಫ್ಯಾನ್ಸ್ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ವೈಫಲ್ಯಕ್ಕೆ ಕೆಎಲ್ ರಾಹುಲ್ ಅವರೇ ಹೊಣೆ ಎನ್ನುವಂತೆ ಬಿಂಬಿಸಲಾಗಿತ್ತು. ಇತ್ತೀಚೆಗೆ ಕಳಪೆ ಫಾರ್ಮ್ ನಲ್ಲಿರುವುದಕ್ಕೆ ಕೆಎಲ್ ರಾಹುಲ್ ರನ್ನು ಈ ಪಂದ್ಯದಲ್ಲಿ ಆಡುವ ಬಳಗದಿಂದಲೇ ಹೊರಗಿಡಲಾಗಿದೆ. ಆದರೆ ಹಾಗಂತ ಭಾರತದ ಬ್ಯಾಟಿಂಗ್ ಏನೂ ಸುಧಾರಿಸಿಲ್ಲ.
ಘಟಾನುಘಟಿ ಬ್ಯಾಟಿಗರಿದ್ದರೂ ಕೇವಲ 156 ರನ್ ಗಳಿಗೆ ಆಲೌಟ್ ಆಗಿತ್ತು ಇದರ ಬೆನ್ನಲ್ಲೇ ಕೆಎಲ್ ರಾಹುಲ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ರೋಹಿತ್ ಶರ್ಮಾರನ್ನು ಇನ್ನಿಲ್ಲದಂತೆ ರೋಸ್ಟ್ ಮಾಡುತ್ತಿದ್ದಾರೆ.
ಈ ಪಂದ್ಯದಲ್ಲಿ ರಾಹುಲ್ ರನ್ನು ಕಿತ್ತುಕೊಂಡು ಏನು ಸಾಧನೆ ಮಾಡಿದಿರಿ? ನಿಮ್ಮ ಬ್ಯಾಟಿಂಗ್ ಸುಧಾರಣೆಯಾಗಿದೆಯೇ? ಇದಕ್ಕೂ ಕೆಎಲ್ ರಾಹುಲ್ ರನ್ನೇ ದೂಷಿಸುತ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ರಾಹುಲ್ ಪೆವಿಲಿಯನ್ ನಲ್ಲಿ ಕೂತು ನೃತ್ಯ ಮಾಡುತ್ತಿರುವಂತಹ ವಿಡಿಯೋ ಪ್ರಕಟಿಸಿ ಟ್ರೋಲ್ ಮಾಡಿದ್ದಾರೆ.