Publish Date: Fri, 25 Oct 2024 (11:43 IST)
Updated Date: Fri, 25 Oct 2024 (11:46 IST)
ಪುಣೆ: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಮತ್ತೊಮ್ಮೆ ಭಾರತದ ಬ್ಯಾಟಿಂಗ್ ಕೈ ಕೊಟ್ಟಿದೆ. ರೋಹಿತ್ ಶರ್ಮಾ ಬಳಿಕ ವಿರಾಟ್ ಕೊಹ್ಲಿ ಕೂಡಾ ಜುಜುಬಿ ಮೊತ್ತಕ್ಕೆ ಔಟಾಗಿದ್ದಾರೆ.
ಭಾರತ ಇತ್ತೀಚೆಗಿನ ವರದಿ ಬಂದಾಗ ಭಾರತ 7 ವಿಕೆಟ್ ನಷ್ಟಕ್ಕೆ 107 ರನ್ ಗಳಿಸಿದೆ. ಮೊದಲ ಪಂದ್ಯದ ಮೊದಲ ಇನಿಂಗ್ಸ್ ನಂತೆ ಇಲ್ಲಿಯೂ ಬ್ಯಾಟಿಗರು ಸಂಪೂರ್ಣ ವೈಫಲ್ಯ ಅನುಭವಿಸಿದ್ದಾರೆ. ರೋಹಿತ್ ಶರ್ಮಾ ಶೂನ್ಯಕ್ಕೆ ಔಟಾಗಿದ್ದರೆ, ವಿರಾಟ್ ಕೊಹ್ಲಿ 1 ರನ್ ಗೆ ವಿಕೆಟ್ ಒಪ್ಪಿಸಿದ್ದಾರೆ.
ಸ್ಯಾಂಟ್ನರ್ ಎಸೆತದಲ್ಲಿ ಬೌಲ್ಡ್ ಆದ ವಿರಾಟ್ ಕೊಹ್ಲಿ ತೀವ್ರ ಆಘಾತಕ್ಕೊಳಗಾದರು. ಬ್ಯಾಟ್ ಕೆಳಗೆ ಹಾಕಿ ತಲೆ ತಗ್ಗಿಸಿ ಬೇಸರದಲ್ಲಿ ಅರೆಕ್ಷಣ ಕೂತರು. ಬಳಿಕ ನಿರಾಸೆಯಿಂದ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದರು. ಅವರ ಈ ಪರಿಸ್ಥಿತಿ ನೋಡಿ ಅಭಿಮಾನಿಗಳೂ ಸೋಷಿಯಲ್ ಮೀಡಿಯಾದಲ್ಲಿ ಬೇಸರ ಹೊರಹಾಕಿದ್ದಾರೆ.
ವಿರಾಟ್ ಕೊಹ್ಲಿ ಇತ್ತೀಚೆಗಿನ ದಿನಗಳಲ್ಲಿ ತಮ್ಮ ಎಂದಿನ ಅಬ್ಬರದ ಇನಿಂಗ್ಸ್ ಆಡಿದ್ದೇ ಇಲ್ಲ. ಅದರಲ್ಲೂ ಶತಕ ಸಿಡಿಸಿ ಕೆಲವು ಸಮಯವೇ ಕಳೆದಿದೆ. ಇಂದು ಮತ್ತೊಮ್ಮೆ ಅವರು ವೈಫಲ್ಯಕ್ಕೊಳಗಾಗಿದ್ದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಅವರು ಔಟ್ ಆದ ಕ್ಷಣದ ವಿಡಿಯೋ ಇಲ್ಲಿದೆ ನೋಡಿ.