Select Your Language

Notifications

webdunia
webdunia
webdunia
webdunia

ತುಳುನಾಡಿನ ಮಗ ಕೆಎಲ್ ರಾಹುಲ್ ಮೈದಾನದಲ್ಲೇ ಕಾಂತಾರ ಪಿಕ್ಚರ್ ತೋರಿಸಿದ್ರು

ಆರ್‌ಸಿಬಿ vs ಕೆಕೆಆರ್‌ ಪಂದ್ಯ, ಕಾಂತಾರ ಸಿನಿಮಾ, ಕೆಎಲ್ ರಾಹುಲ್

Sampriya

ಬೆಂಗಳೂರು , ಶುಕ್ರವಾರ, 11 ಏಪ್ರಿಲ್ 2025 (18:21 IST)
Photo Courtesy X
ಬೆಂಗಳೂರು:  ಆರ್‌ಸಿಬಿ ವಿರುದ್ಧದ ಪಂದ್ಯಾಟದಲ್ಲಿ ಗೆಲುವು ಸಾಧಿಸಿದ ಬಳಿಕ ತುಳುನಾಡಿನ ಮಗ ಕೆಎಲ್ ರಾಹುಲ್ ಮೈದಾನದಲ್ಲೇ ಕಾಂತಾರ ಪಿಕ್ಚರ್ ತೋರಿಸಿದ್ರು.

ಆರ್‌ಸಿಬಿಯನ್ನು ಮಣಿಸಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತಮ್ಮ ಆಕ್ರೋಶವನ್ನು ಹೊರ ಹಾಕುವ ಮೂಲಕ ಕಾಂತಾರ ಸಿನಿಮಾದ ದೃಶ್ಯವನ್ನು ಕೆಎಲ್ ರಾಹುಲ್ ಕ್ರಿಯೇಟ್ ಮಾಡಿದ ಹಾಗಿತ್ತು.

ಇನ್ನು ತಮ್ಮ ಅಕ್ರಮಣಕಾರಿ ಮತ್ತು ಭಾವುಕ ಸೆಲೆಬ್ರೇಷನ್ ಕುರಿತು ಪಂದ್ಯದ ಬಳಿಕ ಮಾತನಾಡಿರುವ ಕೆಎಲ್ ರಾಹುಲ್, ಇದು ನನ್ನ ಸೆಲೆಬ್ರೇಷನ್ ಅಲ್ಲ. ನನ್ನ ಫೇವರಿಟ್ ಚಿತ್ರ ಕಾಂತಾರಾದಲ್ಲಿ ಬರುವ ಒಂದು ಸನ್ನಿವೇಶದ್ದು ಎಂದು ಹೇಳಿದ್ದಾರೆ. ಚಿತ್ರಗಳಲ್ಲಿ ನನಗೆ ಕಾಂತಾರಾ ಫೇವರಿಟ್ ಚಿತ್ರವಾಗಿದ್ದು, ಚಿನ್ನಸ್ವಾಮಿ ಕ್ರೀಡಾಂಗಣ ನನ್ನ ವಿಶೇಷ ಸ್ಥಳವಾಗಿದೆ. ಹೀಗಾಗಿ ಅಲ್ಲಿ ನನ್ನ ಉತ್ತಮ ಪ್ರದರ್ಶನ ವಿಶೇಷವಾಗಿದೆ. ಈ ಸ್ಥಳ ಎಷ್ಟು ವಿಶೇಷ ಎಂಬುದನ್ನು ತೋರಿಸಲು ನಾನು ಆ ರೀತಿ ಸೆಲೆಬ್ರೇಟ್ ಮಾಡಿದೆ. ಇದು ನಾನು ಆಡಿ ಬೆಳೆದ ವಿಶೇಷ ಸ್ಥಳ. ಇದು ನನ್ನ ಗ್ರೌಂಡ್ ಎಂದು ಕೆಎಲ್ ರಾಹುಲ್ ಹೇಳಿದ್ದಾರೆ.

ಇನ್ನೂ ಒಂದು ರನ್‌ ಬಾಕಿ ಇರುವಂತೆ ಸಿಕ್ಸ್ ಬಾರಿಸಿ ಡೆಲ್ಲಿ ಕ್ಯಾಪಿಟಲ್ಸ್‌ ಗೆಲುವಿಗೆ ಕನ್ನಡಿಗ ಕೆಎಲ್ ರಾಹುಲ್‌ ಪ್ರಮುಖ ಕಾರಣರಾದರು.  

ಹೆಲ್ಮೆಟ್ ತೆಗೆದು, ತನ್ನ ಬ್ಯಾಟ್‌ನಿಂದ ವೃತ್ತವನ್ನು ಎಳೆದು, ಅದನ್ನು ನೆಲಕ್ಕೆ ಬಡಿದು, ಇದು ನನ್ನ ನೆಲ ಎಂದು ಎದೆ ಮುಟ್ಟಿ ತೋರಿಸಿದರು.  ಯಾವುದೇ ಪದಗಳನ್ನು ಬಳಸದೆ ಕೆಎಲ್ ರಾಹುಲ್ ತಮ್ಮ ಸನ್ನೆ ಮೂಲಕನೇ ಆರ್‌ಸಿಬಿ ಪ್ರಾಂಚೈಸಿಗೆ ತಿರುಗೇಟು ನೀಡಿದರು.

ಕೆಲವೇ ನಿಮಿಷಗಳಲ್ಲಿ ಈ ವಿಡಿಯೋ ಭಾರೀ ವೈರಲ್ ಆಯಿತು. ಹಿಂದೆಂದೂ ಕಂಡರಿಯದ ರೀತಿಯಲ್ಲಿ ರಾಹುಲ್ ನೋಡಿ ಅಭಿಮಾನಿಗಳು ಶಾಕ್ ಆದರು. ರಾಹುಲ್‌ ಅವರ ಆಕ್ರೋಶ ಕಾಂತಾರ ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ರಿಷಬ್ ಶೆಟ್ಟಿ ನಟನೆಯನ್ನು ನೋಡಿದ ಹಾಗೆಯೇ ಇತ್ತು.

Share this Story:

Follow Webdunia kannada

ಮುಂದಿನ ಸುದ್ದಿ

IPL 2025: ಹ್ಯಾಟ್ರಿಕ್‌ ಸೋಲಿನಿಂದ ಕಂಗೆಟ್ಟಿರುವ ಚೆನ್ನೈ, ನಾಯಕ ಎಂಎಸ್‌ ಧೋನಿಗೆ ಇಂದು ಹೊಸ ಚಾಲೆಂಜ್‌