Publish Date: Tue, 22 May 2018 (08:58 IST)
Updated Date: Tue, 22 May 2018 (09:01 IST)
ಮುಂಬೈ: ಈ ಐಪಿಎಲ್ ಆವೃತ್ತಿಯ ಪ್ಲೇ ಆಫ್ ಪಂದ್ಯಗಳು ಇಂದಿನಿಂದ ಆರಂಭವಾಗಲಿದ್ದು, ಕ್ರಿಕೆಟ್ ಪ್ರಿಯರು ಕುತೂಹಲದಿಂದ ಎದುರು ನೋಡುವಂತಾಗಿದೆ.
ಕೊನೆಯ ಘಟ್ಟಕ್ಕೆ ಬಂದಿರುವ ಐಪಿಎಲ್ ನ ಈ ಆವೃತ್ತಿಯ ಮೊದಲ ಪ್ಲೇ ಆಫ್ ಪಂದ್ಯದಲ್ಲಿ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮತ್ತು ಕೇನ್ ವಿಲಿಯಮ್ಸನ್ ನೇತೃತ್ವದ ಸನ್ ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಲಿದೆ.
ಆರಂಭದಿಂದಲೂ ಭರ್ಜರಿ ಸದ್ದು ಮಾಡುತ್ತಲೇ ಇದ್ದ ಸಿಎಸ್ ಕೆ ಮತ್ತು ಸೈಲಂಟ್ ಕಿಲ್ಲರ್ ನಂತೆ ಎದುರಾಳಿಗಳನ್ನು ಮಣಿಸಿದ ಹೈದರಾಬಾದ್ ತಂಡದ ನಡುವಿನ ಕಾದಾಟ ಇಂಟ್ರಸ್ಟಿಂಗ್ ಎನಿಸಲಿವೆ. ಲೀಗ್ ಪಂದ್ಯಗಳಲ್ಲಿ ಎರಡೂ ತಂಡಗಳು ಸಮಬಲದ ಪ್ರದರ್ಶನ ಕಾಯ್ದುಕೊಂಡಿದ್ದವು. ಕೆಲವೇ ಕೆಲವು ನೆಟ್ ರನ್ ರೇಟ್ ಆಧಾರದಲ್ಲಿ ಇವೆರಡೂ ಒಂದು ಮತ್ತು ಎರಡನೇ ಸ್ಥಾನದಲ್ಲಿವೆ.
ಹೀಗಾಗಿ ಮೊದಲ ಪಂದ್ಯವೇ ಕಳೆಗಟ್ಟಲಿರುವುದು ಖಚಿತ. ಮುಂಬೈ ವಾಂಖೆಡೆ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆದ್ದವರು ಮೇ 27 ರಂದು ನಡೆಯಲಿರುವ ಫೈನಲ್ ಪಂದ್ಯ ಆಡಲಿರುವ ಬಲಾಢ್ಯ ತಂಡ ಯಾವುದೆಂದು ನಿರ್ಧರಿಸಲಿದೆ. ಎರಡೂ ತಂಡಗಳೂ ಸಮಬಲರಾದ್ದರಿಂದ ವೀಕ್ಷಕರ ಕುತೂಹಲವೂ ಹೆಚ್ಚಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.